alex Certify ಮದ್ಯಸೇವಿಸಿ ಮಲಗಿದ್ದ ರಷ್ಯಾ ಮಹಿಳೆ ಮೇಲೆ ಹೋಟೆಲ್ ಸಿಬ್ಬಂದಿಯಿಂದಲೇ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯಸೇವಿಸಿ ಮಲಗಿದ್ದ ರಷ್ಯಾ ಮಹಿಳೆ ಮೇಲೆ ಹೋಟೆಲ್ ಸಿಬ್ಬಂದಿಯಿಂದಲೇ ಅತ್ಯಾಚಾರ

ಪಣಜಿ: ಗೋವಾದ ಹೋಟೆಲ್‌ ನಲ್ಲಿ ರಷ್ಯಾದ ಮಹಿಳೆ ಮೇಲೆ ಇಬ್ಬರು ಹೋಟೆಲ್ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ.

ಶುಚಿಗೊಳಿಸುವ ನೆಪದಲ್ಲಿ ಕೊಠಡಿಗೆ ನುಗ್ಗಿದ್ದ ಹೋಟೆಲ್ ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ನೇಪಾಳಿ ಪ್ರಜೆಗಳು ಅತ್ಯಾಚಾರವೆಸಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಗೋವಾದ ಹೋಟೆಲ್‌ನಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

37 ವರ್ಷದ ರಷ್ಯಾದ ಮಹಿಳೆ ಗುರುವಾರ ಗೋವಾಕ್ಕೆ ಆಗಮಿಸಿದ್ದು, ಇತರ ಇಬ್ಬರು ವ್ಯಕ್ತಿಗಳೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದರು. ಗುರುವಾರ ಸಂಜೆ ನಗರದ ಹಲವಾರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ನಂತರ ತನ್ನ ಹೋಟೆಲ್ ಕೋಣೆಗೆ ಮರಳಿದಳು.

ಹೋಟೆಲ್‌ಗೆ ಹಿಂತಿರುಗಿದ ನಂತರ, ಮಹಿಳೆ ಮದ್ಯ ಸೇವಿಸಿ ತನ್ನ ಕೋಣೆಯಲ್ಲಿ ಮಲಗಿದ್ದಳು. ಆ ಸಮಯದಲ್ಲಿ ಆಕೆಯೊಂದಿಗೆ ಇತರ ಇಬ್ಬರು ರೂಮ್‌ ಮೇಟ್‌ ಗಳು ಇರಲಿಲ್ಲ. ಆರೋಪಿಗಳಲ್ಲಿ ಒಬ್ಬ ಸ್ವಚ್ಛಗೊಳಿಸುವ ನೆಪದಲ್ಲಿ ಮಹಿಳೆಯ ಕೋಣೆಗೆ ನುಗ್ಗಿ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಮಹಿಳೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದಿರಲಿಲ್ಲ ಎಂದು ಉತ್ತರ ಗೋವಾದ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ನಿಧಿನ್ ವಲ್ಸನ್ ಹೇಳಿದ್ದಾರೆ.

ಸ್ವಲ್ಪ ಸಮಯದ ನಂತರ, ಎರಡನೇ ರೂಮ್ ಬಾಯ್ ಕೋಣೆಗೆ ಪ್ರವೇಶಿಸಿ ಅತ್ಯಾಚಾರ ಎಸಗಲು ಮುಂದಾದಾಗ ಎಚ್ಚರವಾಗಿ ಕೂಗಾಡಿದ್ದಾಳೆ. ಇಬ್ಬರು ಆರೋಪಿಗಳನ್ನು ಸಖಿಲ್ ಅನ್ಸಾರಿ(23) ಮತ್ತು ಸಾಯುಂಧೀನ್ ಅನ್ಸಾರಿ(23) ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...