alex Certify ಈ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ರಸ್ತೆ ಗುಂಡಿಯ ಫೋಟೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ ರಸ್ತೆ ಗುಂಡಿಯ ಫೋಟೋ..!

ಭಾರತೀಯರಿಗೆ ಹಾಳಾದ ರಸ್ತೆಗಳು ಹೊಸ ವಿಷಯವೇನಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಕೆಲ ಪೋಸ್ಟ್​ಗಳನ್ನ ನೋಡಿದ ಬಳಿಕ ಬ್ರಿಟನ್​ನವರಿಗೂ ಇದು ಹೊಸ ವಿಚಾರವಲ್ಲ ಎಂಬ ವಿಚಾರ ತಿಳಿದುಬಂದಿದೆ.

@NoContextBrits ಎಂಬ ಹೆಸರಿನ ಟ್ವಿಟರ್​ ಖಾತೆಯಲ್ಲಿ ಬ್ರಿಟನ್​ ರಸ್ತೆಯೊಂದರ ಫೋಟೋ ಶೇರ್​ ಮಾಡಲಾಗಿದ್ದು ಇದರಲ್ಲಿ ಗುಂಡಿ ಬಿದ್ದ ರಸ್ತೆಯನ್ನೆಲ್ಲ ಟಾರ್​ನಿಂದ ಮುಚ್ಚಲಾಗಿದೆ.

ಬ್ರಿಟನ್​ನ ರಸ್ತೆಗಳು ಮಾತ್ರ ಈ ರೀತಿ ಕಾಣೋದಕ್ಕೆ ಸಾಧ್ಯ ಎಂದು ಈ ಪೋಸ್ಟ್​ಗೆ ಶೀರ್ಷಿಕೆ ನೀಡಲಾಗಿತ್ತು. ಆದರೆ ಈ ಫೋಟೋ ನೋಡಿದ ಬಳಿಕ ಅನೇಕರು ತಮ್ಮ ಊರಿನ ರಸ್ತೆಗಳ ಫೋಟೋವನ್ನ ಹಂಚಿಕೊಂಡಿದ್ದಾರೆ. ಈ ಟ್ವಿಟರ್​ ಪೋಸ್ಟ್​ ಇದೀಗ 85 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ.

ಅರ್ಜೆಂಟೀನಾದ ವ್ಯಕ್ತಿಯೊಬ್ಬ ಈ ಫೋಟೋಗಳನ್ನ ಶೇರ್​ ಮಾಡಿದ್ದು ಇದರಲ್ಲಿ ಅವರು ಪಾಟ್​ಹೋಲ್ಸ್​ ಬರ್ತಡೇ ಮಾಡುವ ವಿಚಾರವನ್ನ ಶೇರ್​ ಮಾಡಿದ್ದಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೇಕ್​ನ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.

— No Context Brits (@NoContextBrits) July 17, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...