alex Certify ಟೋಕಿಯೋ ಒಲಿಂಪಿಕ್ ​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಈ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ ​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಈ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು

ಭಾರತದ ಜನಸಂಖ್ಯೆಯಲ್ಲಿ ಕೇವಲ 4.4 ಪ್ರತಿಶತ ಪಾಲನ್ನ ಹೊಂದಿರುವ ದೇಶದ ಎರಡು ರಾಜ್ಯಗಳು ಟೋಕಿಯೋ ಒಲಿಂಪಿಕ್​ಗೆ ಒಟ್ಟು 50 ಕ್ರೀಡಾಪಟುಗಳನ್ನ ಕಳುಹಿಸುವ ಮೂಲಕ ಸಾಧನೆ ಮಾಡಿವೆ. ಹರಿಯಾಣ ರಾಜ್ಯದಿಂದ 31 ಕ್ರೀಡಾಪಟುಗಳು ಹಾಗೂ ಪಂಜಾಬ್​ನಿಂದ 19 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್​ಗೆ ಆಯ್ಕೆಯಾಗಿದ್ದಾರೆ.

ಮೂರನೇ ಸ್ಥಾನದಲ್ಲಿ ತಮಿಳುನಾಡು ಇದ್ದು 11 ಆಟಗಾರರನ್ನ ಟೋಕಿಯೋಗೆ ಕಳುಹಿಸಿದೆ. ಇನ್ನು ತಲಾ 8 ಆಟಗಾರರನ್ನ ಕಳುಹಿಸುವ ಮೂಲಕ ಕೇರಳ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಟಾಪ್​ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಭಾರತೀಯ ಜನಸಂಖ್ಯೆಯಲ್ಲಿ ಉತ್ತರ ಪ್ರದೇಶ 17 ಪ್ರತಿಶತ ಪಾಲನ್ನ ಹೊಂದಿದ್ದರೆ ಒಲಿಂಪಿಕ್​ ಆಟಗಾರರ ಪಟ್ಟಿಯಲ್ಲಿ 6.3 ಪ್ರತಿಶತ ಪಾಲನ್ನು ಹೊಂದಿದೆ. ಇನ್ನು ದೇಶದ ಜನಸಂಖ್ಯೆಯಲ್ಲಿ 2.6 ಪ್ರತಿಶತ ಪಾಲನ್ನ ಹೊಂದಿರುವ ಕೇರಳ ಒಲಿಂಪಿಕ್​ ಆಟಗಾರರ ಪಟ್ಟಿಯಲ್ಲಿ 6.3 ಪ್ರತಿಶತ ಕೊಡುಗೆ ನೀಡಿದೆ.

ಹರಿಯಾಣದಿಂದ 9 ಮಹಿಳಾ ಹಾಕಿ ಆಟಗಾರರು, 7 ಮಂದಿ ಕುಸ್ತಿ ಪಟುಗಳು, 4 ಬಾಕ್ಸರ್ಸ್ ಹಾಗೂ ನಾಲ್ವರು ಶೂಟರ್​​ಗಳು ಟೊಕಿಯೋ ಒಲಿಂಪಿಕ್ಸ್​ಗೆ ಆಯ್ಕೆಯಾಗಿದ್ದಾರೆ.

ಪಂಜಾಬ್​ ರಾಜ್ಯದಿಂದ 11 ಮಂದಿ ಹಾಕಿ ಆಟಗಾರರು ಟೋಕಿಯೋ ಟಿಕೆಟ್​ ಪಡೆದಿದ್ದಾರೆ. ಇಬ್ಬರು ಶೂಟರ್ಸ್, ನಾಲ್ಕು ಓಟಗಾರರು, ಇಬ್ಬರು ಮಹಿಳಾ ಹಾಕಿ ಆಟಗಾರ್ತಿಯರು ಹಾಗೂ ಒರ್ವ ಬಾಕ್ಸರ್​ ಒಲಿಂಪಿಕ್​ ರೇಸ್​ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ.

ತಮಿಳುನಾಡಿನಿಂದ ಐವರು ಅಥ್ಲೆಟಿಕ್ಸ್​​, ಮೂವರು ಸೈಲಿಂಗ್​, ಇಬ್ಬರು ಟೆನ್ನಿಸ್​ ಆಟಗಾರರು ಹಾಗೂ ಓರ್ವ ಫೆನ್ಸಿಂಗ್​​ ಕ್ರೀಡಾಳು ಇದ್ದಾರೆ.

ಅಥ್ಲೆಟಿಕ್ಸ್​ ಪರಂಪರೆಯನ್ನ ಮುಂದುವರಿಸಿರುವ ಕೇರಳ ಆರು ಮಂದಿ ಟ್ರ್ಯಾಕ್​ & ಫೀಲ್ಡ್​ ಹಾಗೂ ಸ್ವಿಮ್ಮಿಂಗ್, ಹಾಕಿ ಪುರುಷರ ತಂಡಕ್ಕೆ ಓರ್ವ ಆಟಗಾರರನ್ನ ಕಳುಹಿಸಿಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...