alex Certify ಒಲಿಂಪಿಕ್ಸ್ ಉದ್ಘಾಟನೆಗೆ 4 ದಿನ ಇರುವಾಗಲೇ ಕೊರೋನಾ ಶಾಕ್: ಕ್ರೀಡಾಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲಿಂಪಿಕ್ಸ್ ಉದ್ಘಾಟನೆಗೆ 4 ದಿನ ಇರುವಾಗಲೇ ಕೊರೋನಾ ಶಾಕ್: ಕ್ರೀಡಾಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು

ಟೋಕಿಯೋ: ಟೊಕಿಯೋ ಒಲಿಂಪಿಕ್ಸ್ ಉದ್ಘಾಟನೆ ಸಮಾರಂಭಕ್ಕೆ ನಾಲ್ಕು ದಿನ ಇರುವಾಗಲೇ ಕ್ರೀಡಾ ಗ್ರಾಮದಲ್ಲಿ ಕೊರೋನಾ ಆತಂಕ ಮೂಡಿಸಿದೆ.

ಕ್ರೀಡಾ ಗ್ರಾಮದಲ್ಲಿ ಮೊದಲಿಗೆ ಕರ್ತವ್ಯನಿರತ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಭಾನುವಾರ ಮತ್ತಷ್ಟು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ತಂಡದೊಂದಿಗೆ ಆಗಮಿಸಿದ ಅಧಿಕಾರಿಗಳಿಗೂ ಕೊರೋನಾ ಪಾಸಿಟಿವ್ ವರದಿ ಬಂದಿದೆ ಎಂದು ಕ್ರೀಡಾ ಕೂಟದ ಆಯೋಜಕರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಫುಟ್ಬಾಲ್ ತಂಡದ ಆಟಗಾರರಿಗೆ ಕೊರೋನಾ ಸೋಂಕು ತಗುಲಿದ್ದು, ರಗ್ಬಿ ಸೆವೆನ್ಸ್ ತಂಡದ ಕೋಚ್ ಗೂ ಕೊರೋನಾ ಇರುವುದು ದೃಢಪಟ್ಟಿದೆ. ಇನ್ನೂ ಅನೇಕರಿಗೆ ಸೋಂಕು ತಗುಲಿದ್ದು, ಇದರ ನಡುವೆಯೇ ಒಲಿಂಪಿಕ್ಸ್ ಆರಂಭಕ್ಕೆ ಸಂಪೂರ್ಣ ತಯಾರಿ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...