alex Certify ಈ ಹಾಸಿಗೆಯ ಮೇಲೆ ಮಲಗಿದ್ರೆ ಸಾಕು…… ಸಿಗುತ್ತೆ ವಾರ್ಷಿಕ 24 ಲಕ್ಷ ರೂಪಾಯಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಾಸಿಗೆಯ ಮೇಲೆ ಮಲಗಿದ್ರೆ ಸಾಕು…… ಸಿಗುತ್ತೆ ವಾರ್ಷಿಕ 24 ಲಕ್ಷ ರೂಪಾಯಿ..!

ಬ್ರಿಟನ್​​ನ ಪ್ರಸಿದ್ಧ ಹಾಸಿಗೆಗಳ ಕಂಪನಿಯಾದ ಕ್ರಾಫ್ಟೆಡ್​ ಬೆಡ್ಸ್​ ನೆಟ್​ಫ್ಲಿಕ್ಸ್​ & ಚಿಲ್​ ಎಂಬ ಐಡಿಯಾಗೆ ಹೊಸ ವ್ಯಾಖ್ಯಾನವನ್ನು ನೀಡಿದೆ. ದಿನವಿಡೀ ಹಾಸಿಗೆಯ ಮೇಲೆ ಮಲಗಿ ನೆಟ್​ಫ್ಲಿಕ್ಸ್​​ ವೀಕ್ಷಿಸುವ ಬ್ರಿಟನ್​ ನಿವಾಸಿಗಳಿಗೆ ಈ ಕಂಪನಿಯು ವಾರ್ಷಿಕ 24,82,322.40 ರೂಪಾಯಿಗಳನ್ನು ನೀಡುತ್ತಿದೆ.

‘ಹಾಸಿಗೆ ಪರೀಕ್ಷೆ’ಗೆ ಪ್ರಸ್ತುತ ಕಂಪನಿಯು ಅರ್ಜಿಯನ್ನು ಸ್ವೀಕರಿಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದಿನವಿಡೀ ಹಾಸಿಗೆ ಮೇಲೆ ಮಲಗಿ ಈ ದೊಡ್ಡ ಮೊತ್ತವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಹಾಸಿಗೆಗಳನ್ನು ನೀಡುವ ಸಲುವಾಗಿ ಈ ಪರೀಕ್ಷೆಯನ್ನು ಆಯೋಜಿಸಿರುವುದಾಗಿ ಕಂಪನಿ ಹೇಳಿದೆ.‌

ಹಾಸಿಗೆ ಪರೀಕ್ಷಕರಾಗಿ ಆಯ್ಕೆಯಾಗುವ ಸಿಬ್ಬಂದಿಯು ಹೊಸ ಗುಣಮಟ್ಟದ ಹಾಸಿಗೆಗಳನ್ನು ಪ್ರತಿ ವಾರ ಪರೀಕ್ಷೆ ಮಾಡಬೇಕಾಗುತ್ತದೆ. ಇದರ ಜೊತೆಯಲ್ಲಿ ಇನ್ನು ಕೆಲವು ಕರ್ತವ್ಯ ಹಾಗೂ ನಿಯಮಗಳನ್ನು ಪಾಲಿಸಬೇಕು.

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವಾರದಲ್ಲಿ 37.5 ಗಂಟೆಗಳ ಸಮಯವನ್ನು ಹಾಸಿಗೆಯ ಮೇಲೆ ಮಲಗಲು ಮೀಸಲಿಡಬೇಕು. ಈ ಅವಧಿಯಲ್ಲಿ ಸಿಬ್ಬಂದಿಯು ಹಾಸಿಗೆ ಎಷ್ಟು ಆರಾಮದಾಯಕವಾಗಿದೆ ಎಂಬುದರ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು.

ಪ್ರತಿ ವಾರ ಕಂಪನಿಯು ಹೊಸ ಹಾಸಿಗೆಗಳನ್ನು ಮನೆಗೇ ಕಳುಹಿಸಿಕೊಡುತ್ತದೆ. ಇದರ ಮೇಲೆ ಮಲಗಿ ಹಾಸಿಗೆ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವುದು ಈ ಸಿಬ್ಬಂದಿಯ ಕೆಲಸವಾಗಿರುತ್ತದೆ. ಈ 37.5 ಗಂಟೆಗಳ ಅವಧಿಯಲ್ಲಿ ನೀವು ಹಾಸಿಗೆಯ ಮೇಲೆ ನಿದ್ರಿಸಬಹುದು ಅಥವಾ ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ವೀಕ್ಷಣೆಯನ್ನು ಮಾಡಬಹುದು.

ಇನ್ನು ಈ ವಿಚಾರವಾಗಿ ಮಾತನಾಡಿದ ಕ್ರ್ಯಾಫ್ಟೆಡ್​ ಬೆಡ್ಸ್​ ಮಾರ್ಕೆಟಿಂಗ್​ ಮ್ಯಾನೇಜರ್​​ ಬ್ರೇನ್​ ಡಿಲ್ಲೋನ್​, ಗ್ರಾಹಕರನ್ನು ತೃಪ್ತಿಪಡಿಸುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ನಾವು ಗ್ರಾಹಕರಿಂದ ಹಾಸಿಗೆಯ ಗುಣಮಟ್ಟದ ಬಗ್ಗೆ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದ್ದೇವೆ. ಇದು ಹಾಗೆಯೇ ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ. ಇದೇ ಕಾರಣಕ್ಕಾಗಿ ನಾವು ಈ ಹಾಸಿಗೆ ಪರೀಕ್ಷೆ ಎಂಬ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...