alex Certify Special: ಈ ದಿನ ಕ್ರಿಕೆಟ್ ಕಾಶಿ ʼಲಾರ್ಡ್ಸ್ʼ ಅಂಗಳದಲ್ಲಿ ದಾಖಲೆ ಬರೆದಿತ್ತು ಟೀಂ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Special: ಈ ದಿನ ಕ್ರಿಕೆಟ್ ಕಾಶಿ ʼಲಾರ್ಡ್ಸ್ʼ ಅಂಗಳದಲ್ಲಿ ದಾಖಲೆ ಬರೆದಿತ್ತು ಟೀಂ ಇಂಡಿಯಾ

ಜೂನ್ 10, 1986 ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸದಾ ವಿಶೇಷವಾದ ದಿನಾಂಕ. ಕಪಿಲ್ ದೇವ್‌ ನೇತೃತ್ವದ ಭಾರತ ತಂಡವು ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಕ್ರಿಕೆಟ್‌ನ ಕಾಶಿ ಎಂದೇ ಹೇಳಲಾಗುವ ಲಾರ್ಡ್ಸ್ ಅಂಗಳದಲ್ಲಿ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಮಣಿಸಿದ ದಿನ ಇಂದು.

ಪಂದ್ಯದ ನಾಲ್ಕನೇ ದಿನ ಆತಿಥೇಯರ ವಿರುದ್ಧ ಐದು ವಿಕೆಟ್‌ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ, ಆ ಸರಣಿಯನ್ನೂ ಗೆದ್ದು ಬಂದಿತ್ತು.

ಇಲ್ಲಿದೆ ಭಾರತದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಉದ್ಯೋಗಗಳ ಪಟ್ಟಿ

ಪಂದ್ಯದಲ್ಲಿ ಮೊದಲು ಫೀಲ್ಡಿಂಗ್‌ಗೆ ಇಳಿದಿದ್ದ ಭಾರತ ಇಂಗ್ಲೆಂಡ್‌ ಅನ್ನು 294ರನ್‌ಗಳಿಗೆ ಕಟ್ಟಿಹಾಕಿತ್ತು. ಭಾರತದ ಪರ ಚೇತನ್‌ ಶರ್ಮಾ (5/64) ಹಾಗೂ ರೋಜರ್‌‌ ಬಿನ್ನಿ (3/55) ಬೌಲಿಂಗ್‌ನಲ್ಲಿ ಮಿಂಚಿದ್ದರು.

ಇದಾದ ಬಳಿಕ ಬ್ಯಾಟ್ ಮಾಡಿದ ಭಾರತ, ದಿಲೀಪ್ ವೆಂಗ್ಸರ್ಕರ್‌‌ರ ಅಜೇಯ 127 ರನ್‌ ನೆರವಿನಿಂದ 341 ರನ್‌ ಪೇರಿಸಿ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ 47 ರನ್‌ ಮುನ್ನಡೆ ಸಾಧಿಸಿತ್ತು. ಲಾರ್ಡ್ಸ್‌‌ನಲ್ಲಿ ಸತತ ಮೂರು ಟೆಸ್ಟ್ ಶತಕ ಗಳಿಸಿರುವ ವೆಂಗ್ಸರ್ಕರ್‌, ಈ ಶ್ರೇಯ ಸಾಧಿಸಿದ ಏಕೈಕ ವಿದೇಶೀ ಬ್ಯಾಟ್ಸ್‌ಮನ್ ಆಗಿದ್ದಾರೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ‘ಮಾಸ್ಕ್’ ಅನಿವಾರ್ಯವಲ್ಲ

ಎರಡನೇ ಇನಿಂಗ್ಸ್‌ನಲ್ಲಿ ಕಪಿಲ್ ದೇವ್‌ (4/52) ಮತ್ತು ಮಣಿಂದರ್‌ ಸಿಂಗ್ (3/9) ದಾಳಿಗೆ ಕಂಗೆಟ್ಟ ಇಂಗ್ಲೆಂಡ್ ಬ್ಯಾಟಿಂಗ್ ಲೈನಪ್ ಕೇವಲ 180 ರನ್‌ಗಳಿಗೆ ಸರ್ವಪತನಗೊಂಡಿತು.

ಪಂದ್ಯ ಗೆಲ್ಲಲು 134 ರನ್‌ಗಳ ಗುರಿ ಪಡೆದ ಭಾರತ, ಆರಂಭದಲ್ಲೇ ಐದು ವಿಕೆಟ್ ಕಳೆದುಕೊಂಡು ಪರದಾಡುತ್ತಿತ್ತು. ಆದರೆ ಕೇವಲ 10 ಎಸೆತಗಳಲ್ಲಿ 23 ರನ್‌ ಚಚ್ಚಿದ ಕಪಿಲ್, ಎದುರಾಳಿ ಬೌಲರ್‌ ಫಿಲ್ ಎಡ್ಮಂಡ್ಸ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಮೂಲಕ ಗೆಲುವು ತಂದುಕೊಟ್ಟರು.

ಈ ಪಂದ್ಯದ ಗೆಲುವಿನೊಂದಿಗೆ ಹೆಡಿಂಗ್ಲೇಯಲ್ಲಿ ನಡೆದ ಎರಡನೇ ಟೆಸ್ಟ್ ಸಹ ಜಯಿಸಿದ ಭಾರತ, ಸರಣಿಯ ಮೂರನೇ ಟೆಸ್ಟ್‌ ಡ್ರಾ ಮಾಡಿಕೊಂಡು ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.

ಅಲ್ಲಿವರೆಗೂ ಲಾರ್ಡ್ಸ್‌ನಲ್ಲಿ ಆಡಿದ್ದ 11 ಪಂದ್ಯಗಳಲ್ಲಿ ಅದೇ ಮೊದಲನೇ ಬಾರಿಗೆ ಗೆಲುವಿನ ನಗೆ ಬೀರಿತ್ತು ಭಾರತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...