alex Certify ವಾಹನ ಮಾಲೀಕರಿಗೆ ಇಲ್ಲಿದೆ ನೆಮ್ಮದಿಯ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಇಲ್ಲಿದೆ ನೆಮ್ಮದಿಯ ಸುದ್ದಿ

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮಾರ್ಚ್ 21ರಂದು ಮೋಟಾರು ವಾಹನದ ಥರ್ಡ್ ಪಾರ್ಟಿ ವಿಮೆಗೆ ಪ್ರಸ್ತಾವಿತ ಪ್ರೀಮಿಯಂ ದರಗಳನ್ನು ಸೂಚಿಸುವ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಆದರೆ ಇದು ಏಪ್ರಿಲ್ ಒಂದರಿಂದ ಜಾರಿಯಾಗುವುದು ಅನುಮಾನ.

ಅಧಿಸೂಚನೆಯ ಪ್ರಕಾರ, ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದ ದಿನಾಂಕದಿಂದ 30 ದಿನಗಳ ಅವಧಿಯ ಮುಕ್ತಾಯದ ನಂತರ ಹೊಸ ದರಗಳು ಮತ್ತು ನಿಯಮ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ವಾಹನ ವಿಮಾ ಪಾಲಿಸಿಗಳು ಎರಡು ಭಾಗಗಳನ್ನು ಹೊಂದಿರುತ್ತವೆ. ಸ್ವಂತ ಹಾನಿ (ಹಾನಿ, ಕಳ್ಳತನದ ವಿರುದ್ಧ ವಾಹನಕ್ಕೆ ವಿಮೆ) ಮತ್ತು ಮೂರನೇ ವ್ಯಕ್ತಿಯ ಹೊಣೆಗಾರಿಕೆ. ಥರ್ಡ್-ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯವಾಗಿದೆ, ಆದರೆ ವಾಹನ ಹಾನಿಗೆ ವಿಮಾ ರಕ್ಷಣೆ ಕಡ್ಡಾಯವಲ್ಲ.

ಸರ್ಕಾರವು 2022-23ಕ್ಕೆ ಥರ್ಡ್ ಪಾರ್ಟಿ ವಿಮೆಯ ಪ್ರೀಮಿಯಂ ಹೆಚ್ಚಳ ಪ್ರಸ್ತಾಪಿಸಿದೆ. ಎಲೆಕ್ಟ್ರಿಕ್ ವಾಹನಗಳಿಗೆ ವಿಮಾ ಪ್ರೀಮಿಯಂನಲ್ಲಿ ಶೇಕಡಾ 15 ಮತ್ತು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೆ ಶೇಕಡಾ 7.5 ರಷ್ಟು ಹೆಚ್ಚಳ ಪ್ರಸ್ತಾಪಿಸಿದೆ.

ಖಾಸಗಿ ಕಾರುಗಳಿಗೆ ಮೂರು ವರ್ಷಗಳವರೆಗೆ ಮತ್ತು ದ್ವಿಚಕ್ರ ವಾಹನಗಳಿಗೆ ಐದು ವರ್ಷಗಳವರೆಗೆ ಥರ್ಡ್ ಪಾರ್ಟಿ ಕವರ್ ಒದಗಿಸಲಾದ ಹೊಸ ವಾಹನಗಳಿಗೆ ಸಂಬಂಧಿಸಿದಂತೆ ಪ್ರೀಮಿಯಂ ದರ ಹೆಚ್ಚಿಸಲಾಗಿದೆ.

ಪ್ರಸ್ತಾವಿತ ದರಗಳ ಪ್ರಕಾರ, 75 ಸಿಸಿ ಮತ್ತು 150 ಸಿಸಿ ನಡುವಿನ ದ್ವಿಚಕ್ರ ವಾಹನಗಳ ಮಾಲೀಕರು ವರ್ಷಕ್ಕೆ ರೂ. 714 (ರೂ 752) ಪಾವತಿಸಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...