alex Certify ಡ್ರೈವಿಂಗ್ ಕಲಿಯಲು ಹೋಗಿ ಚಾಲಕನ ಮೋಹಕ್ಕೆ ಸಿಲುಕಿದ ಮಹಿಳೆಯಿಂದ ಖತರ್ನಾಕ್ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈವಿಂಗ್ ಕಲಿಯಲು ಹೋಗಿ ಚಾಲಕನ ಮೋಹಕ್ಕೆ ಸಿಲುಕಿದ ಮಹಿಳೆಯಿಂದ ಖತರ್ನಾಕ್ ಕೃತ್ಯ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪ್ರಿಯಕರನಿಗೆ ನೀಡಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ ಡ್ರೈವಿಂಗ್ ಶಾಲೆಯ ತರಬೇತುದಾರ ಮದನ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.

ವಿವಾಹ ವಿಚ್ಛೇದನದ ನಂತರ ಜಕ್ಕೂರು ಲೇಔಟ್ ನಿವಾಸಿ ದೀಪ್ತಿ ತಾಯಿಯೊಂದಿಗೆ ವಾಸವಾಗಿದ್ದು, ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಡ್ರೈವಿಂಗ್ ಶಾಲೆಯ ಮದನ್ ಜೊತೆಗೆ ಗೆಳೆತನವಾಗಿದೆ. ಡ್ರೈವಿಂಗ್ ಕಲಿಯಲು ಹೋಗುತ್ತಿದ್ದ ಸಂದರ್ಭದಲ್ಲಿ ಮದನ್ ಪರಿಚಯವಾಗಿ ಆತನಿಗೆ ತನ್ನ ತಾಯಿಯ ಮನೆಯಲ್ಲಿದ್ದ ಒಂದು ಕೆಜಿ ಕಳವು ಮಾಡಿ ಕೊಟ್ಟಿದ್ದಾರೆ. ನಂತರ ಅದೇ ಜಾಗದಲ್ಲಿ ನಕಲಿ ಚಿನ್ನ ತಂದಿರಿಸಿದ್ದಾರೆ.

ನಕಲಿ ಚಿನ್ನ ಗಮನಿಸಿದ ತಾಯಿ ಅನುಮಾನದಿಂದ ಅಮೃತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದ ಪೊಲೀಸರು ಚಿನ್ನ ಕಳವು ಮಾಡಿ ಅಡವಿಟ್ಟು ಮೋಜು ಮಸ್ತಿ ಮಾಡಿದ್ದ ದೀಪ್ತಿ ಮತ್ತು ಮದನ್ ಅವರನ್ನು ಬಂಧಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...