alex Certify ಇಂಟ್ರಸ್ಟಿಂಗ್‌ ಆಗಿದೆ ಈ ಚಿತ್ರ – ವಿಚಿತ್ರ ರೆಸ್ಟೋರೆಂಟ್‌ ಗಳ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟ್ರಸ್ಟಿಂಗ್‌ ಆಗಿದೆ ಈ ಚಿತ್ರ – ವಿಚಿತ್ರ ರೆಸ್ಟೋರೆಂಟ್‌ ಗಳ ಕಥೆ

ಜಗತ್ತಿನಲ್ಲಿ ಕೆಲವೊಂದು ಚಿತ್ರ-ವಿಚಿತ್ರ ರೆಸ್ಟೋರೆಂಟ್‌ಗಳಿವೆ. ಅವುಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ.

ಲ್ಯಾಟೆಕ್ಸ್‌, ಬ್ಯಾಂಕಾಕ್, ಥೈಲ್ಯಾಂಡ್

ಇಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ. ಊಟದ ನಂತರ ಪಾನ್‌ ಅಥವಾ ಮಿಂಟ್‌ ಬದಲು ಇಲ್ಲಿ ಕಾಂಡೋಮ್ ನೀಡಲಾಗುತ್ತದೆ.

ತೈಪೆ, ತೈವಾನ್:

ಇಲ್ಲಿ ಟಾಯ್ಲೆಟ್‌ಗಳು ಟೈಲ್ಡ್ ಗೋಡೆಗಳ ಮೇಲೆ ನೇತಾಡುತ್ತವೆ, ಊಟದ ತಟ್ಟೆಗಳು ಟಾಯ್ಲೆಟ್ ಬೌಲ್‌ಗಳ ಆಕಾರದಲ್ಲಿರುತ್ತವೆ. ತಿನ್ನಲು ಅಸಹ್ಯ ಎನಿಸಿದರೂ ಇದನ್ನು ಸವಿಯಲು ಹಲವರು ಬರುತ್ತಾರೆ.

ವೋಲ್ಟೆರಾ, ಇಟಲಿ

ಇಟಲಿಯ ವೋಲ್ಟೆರಾನಲ್ಲಿರುವ ಫೋರ್ಟೆಝಾ ಮೆಡಿಸಿಯಾ ರೆಸ್ಟೋರೆಂಟ್‌ ಜೈಲಿನ ಫೀಲ್‌ ಈ ರೆಸ್ಟೋರೆಂಟ್‌ನಲ್ಲಿ ನೀಡಲಾಗುತ್ತದೆ. ಕೈದಿಗಳಿಂತೆ ಇಲ್ಲಿ ಕಂಬಿಯ ಹಿಂದೆ ಊಟ ನೀಡಲಾಗುತ್ತದೆ.

ಟೋಕಿಯೋ, ಜಪಾನ್

ಜಪಾನ್‌ನ ಟೋಕಿಯೋದಲ್ಲಿರುವ ಕ್ರಿಸ್ಟನ್ ಕೆಫೆಯಲ್ಲಿ ದೈತ್ಯ ಶಿಲುಬೆ ಇದೆ. ಇಲ್ಲಿ ಶವ ಪೆಟ್ಟಿಗೆ ಆಕಾರದ ಪೆಟ್ಟಿಗೆ ಇದ್ದು, ಅಲ್ಲಿ ಆಹಾರ ಸರಬರಾಜು ಮಾಡಲಾಗುತ್ತದೆ. ಬಣ್ಣದ ಗಾಜಿನ ಕಿಟಕಿಗಳು ಮತ್ತು ವಿಲಕ್ಷಣವಾದ ಬೈಬಲ್ ಇದ್ದು, ಗೋರಿಯ ಒಳಗೆ ಊಟ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ.

ಲಾಸ್ ವೇಗಾಸ್, ಅಮೆರಿಕ

ಅಮೆರಿಕದ ಲಾಸ್ ವೇಗಾಸ್‌ನಲ್ಲಿರುವ ಹಾರ್ಟ್ ಅಟ್ಯಾಕ್ ಗ್ರಿಲ್ ರೆಸ್ಟೋರೆಂಟ್‌ನಲ್ಲಿ ಆಹಾರ ಪೂರೈಸುವವರು ಮಾದಕ ಮಹಿಳೆಯರಾಗಿರುತ್ತಾರೆ.

ಅವರು ಅಂಥದ್ದೇ ಡ್ರೆಸ್‌ ಧರಿಸಿ ಆಹಾರ ಪೂರೈಸಿದರೆ ಇದು ಹಲವರ ರಕ್ತದೊತ್ತಡವನ್ನು ಏರಿಸುತ್ತದೆ ಎನ್ನಲಾಗಿದೆ. ಇಲ್ಲಿ ಅತ್ಯಂತ ಭಾರದ ವ್ಯಕ್ತಿಗೆ ಉಚಿತ ಆಹಾರ ಒದಗಿಸಲಾಗುತ್ತದೆ.

ರಂಗಾಲಿ ದ್ವೀಪ, ಮಾಲ್ಡೀವ್ಸ್

ಇಲ್ಲಿಯ ಇಥಾ ಅಂಡರ್ ಸೀ ರೆಸ್ಟೊರೆಂಟ್ ಸಮುದ್ರದ ಮಟ್ಟದಲ್ಲಿ ಇದೆ. ಅಲ್ಲಿಯೇ ಸಿಗುವ ಮೀನುಗಳನ್ನು ಹಿಡಿದು ಫ್ರೆಷ್‌ ಆಗಿ ಮೀನಿನ ಖಾದ್ಯ ತಯಾರು ಮಾಡಲಾಗುತ್ತದೆ. ಗ್ರಾಹಕರೇ ಹೋಗಿ ಮೀನನ್ನು ಹಿಡಿದು ಕೊಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...