alex Certify ನಂಬಿ ಬಂದವಳಿಗೆ ನರಕಯಾತನೆ: ಪತಿ, ಸಹೋದರರು, ಸ್ನೇಹಿತರಿಂದಲೂ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿ ಬಂದವಳಿಗೆ ನರಕಯಾತನೆ: ಪತಿ, ಸಹೋದರರು, ಸ್ನೇಹಿತರಿಂದಲೂ ಅತ್ಯಾಚಾರ

ಭಾಗಪತ್: ಉತ್ತರಪ್ರದೇಶದಲ್ಲಿ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿ, ಆತನ ಸಹೋದರರು ಮತ್ತು ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ. ಆಕೆಯ ಧರ್ಮವನ್ನು ಬದಲಿಸುವಂತೆ ಬಲವಂತ ಮಾಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿತ ಶಹಜಾದ್ ಮತ್ತು ಆತನ ಪೋಷಕರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ 26 ವರ್ಷದ ಶಹಜಾದ್ ಮದುವೆಯಾಗಿದ್ದ ಎನ್ನಲಾಗಿದೆ.

ಮದುವೆಯ ನೆಪದಲ್ಲಿ ಆತ ಬಾಲಕಿಯ ಧರ್ಮವನ್ನು ಬಲವಂತವಾಗಿ ಬದಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಎನ್.ಎಸ್. ಸಿರೋಹಿ ಅವರು, 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಖ್ಯ ಆರೋಪಿಗಳಾದ ಶಹಜಾದ್, ಆತನ ತಾಯಿ ಮತ್ತು ತಂದೆಯನ್ನು ಭಾನುವಾರ ಬೆಳಗ್ಗೆ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಶಹಜಾದ್ ಈಗಾಗಲೇ ಮದುವೆಯಾಗಿದ್ದು, ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಬಾಲಕಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ. ಆರೋಪಿಯ ಕುಟುಂಬದವರು ಗರ್ಭಪಾತಕ್ಕೆ ಬಲವಂತ ಮಾಡಿದ್ದರು. ಆದರೆ, ಇದಕ್ಕೆ ಬಾಲಕಿ ಒಪ್ಪಿಕೊಂಡಿರಲಿಲ್ಲ. ಶಹಜಾದ್ ಸಹೋದರರು ಮತ್ತು ಸ್ನೇಹಿತರು ಕೂಡ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ಕುಟುಂಬದವರು ದೂರು ನೀಡಿದ್ದಾರೆ.

ಜುಲೈ 6 ರಂದು ಶಹಜಾದ್ ಅತ್ಯಾಚಾರ ಎಸಗಿದ್ದು, ಜುಲೈ 8 ರಂದು ಆತನ ಸಹೋದರರಾದ ಬಿಲಾಲ್ ಮತ್ತು ಫರ್ಮನ್ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಬಾಲಕಿ ಜುಲೈ 10 ರಂದು ಭಯಭೀತಿಯಿಂದ ಮನೆಗೆ ತಲುಪಿದ್ದಾಳೆ. ಆಕೆಯ ಆರೋಗ್ಯ ಹದಗೆಟ್ಟಾಗ ವೈದ್ಯರ ಬಳಿಗೆ ಕರೆದೊಯ್ಯಲಾಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...