ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ಮಳೆಯಿಂದ ರಕ್ಷಿಸಲು ದೇವಾಲಯದ ದೇವತೆಗೆ ಬಳಸುವ ಛತ್ರಿಯನ್ನು ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಚೆನ್ನೈ ಸಮೀಪದ ತಿರುವೊಟ್ಟಿಯೂರಿನ ತ್ಯಾಗರಾಜಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ತಮಿಳುನಾಡಿನಲ್ಲಿ ಮತ್ತೊಂದು ಸಂಚಲನ ಮೂಡಿಸಿದೆ.
ಶೆಫಾಲಿ ವೈದ್ಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋ ಅನ್ನು ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕ್ರೀಡಾ ಅಭಿವೃದ್ಧಿ ಸೆಲ್ ಮುಖ್ಯಸ್ಥ ಅಮರ್ ಪ್ರಸಾದ್ ರೆಡ್ಡಿ ಅವರು ಮರುಟ್ವೀಟ್ ಮಾಡಿದ್ದಾರೆ.
“ಮೇಡ್ ಇನ್ ಚೀನಾದ ಅಗ್ಗದ ಛತ್ರಿಯನ್ನು ದೇವತೆಗೆ ಬಳಸಲಾಗಿದೆ, ಟಿಎನ್ ಸಿಎಂ ಸ್ಟಾಲಿನ್ ಅವರ ಪತ್ನಿಗೆ ಬಳಸಲಾದ ದೇವತೆ ಛತ್ರಿ” ಎಂದು ಶೀರ್ಷಿಕೆ ನೀಡಲಾಗಿದೆ. ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ಮಳೆಯಿಂದ ರಕ್ಷಿಸಲು ದೇವಸ್ಥಾನದ ದೇವರಿಗೆ ಇರಿಸಲಾಗಿದ್ದ ಅಲಂಕೃತ ಛತ್ರಿಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಈ ವಿಡಿಯೋ ತಮಿಳುನಾಡಿನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.