alex Certify 1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ

ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್​ ಮಹಲ್​​ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್​ಮಹಲ್​ ವೀಕ್ಷಣೆಗೆ ಅವಕಾಶ ನೀಡೋದಾಗಿ ಆಡಳಿತ ಮಂಡಳಿ ಹೇಳಿದೆ. ಕೋವಿಡ್​ 19 ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ಅಂದರೆ ಕಳೆದ ವರ್ಷ ಮಾರ್ಚ್​ 17ರಿಂದ ರಾತ್ರಿ ತಾಜ್​​ ಮಹಲ್​ ವೀಕ್ಷಣೆಗೆ ಬ್ರೇಕ್​ ಹಾಕಲಾಗಿತ್ತು.

ರಾತ್ರಿ ತಾಜ್​ ಮಹಲ್​ ವೀಕ್ಷಣೆ ಮಾಡಲು ಆಗಸ್ಟ್​ 21, 22 ಹಾಗೂ 24ರಂದು ಅವಕಾಶ ನೀಡಲಾಗಿದೆ. ಶುಕ್ರವಾರದಂದು ತಾಜ್​ಮಹಲ್​ ಎಂದಿನಂತೆ ಬಂದ್​ ಇರಲಿದೆ. ಭಾನುವಾರ ವೀಕೆಂಡ್​ ಲಾಕ್​ಡೌನ್​ ಜಾರಿಯಲ್ಲಿ ಇರಲಿದೆ.

ತಾಜ್​ ಮಹಲ್​ ರಾತ್ರಿ ವೀಕ್ಷಣೆ ಮಾಡುವರಿಗೆ ರಾತ್ರಿ 8:30ರಿಂದ 9 ಗಂಟೆ ಹಾಗೂ 9:30ರಿಂದ 10 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ. ಪ್ರತಿ ಸ್ಲಾಟ್​​​ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇವಲ 50 ಮಂದಿ ಪ್ರವಾಸಿಗರಿಗೆ ಮಾತ್ರ ಅವಕಾಶ ಇರಲಿದೆ ಎಂದು ಎಎಸ್​ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ವಸಂತ್​ ಕುಮಾರ್​ ಮಾಹಿತಿ ನೀಡಿದ್ದಾರೆ.

ರಾತ್ರಿ ವೇಳೆ ತಾಜ್​ಮಹಲ್​ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇಚ್ಚಿಸುವವರು ಆಗ್ರಾದ 22 ಮಾಲ್​​ ರೋಡ್​ನಲ್ಲಿರುವ ಎಎಸ್​ಐ ಕಚೇರಿ ಕೌಂಟರ್​ನಲ್ಲಿ ಬುಕ್ಕಿಂಗ್​ ಮಾಡಬಹುದಾಗಿದೆ ಎಂದು ಕುಮಾರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...