alex Certify ಅಕ್ಟೋಬರ್‌ 8ಕ್ಕೆ ತೆರೆ ಕಾಣಲಿದೆ ’ನಿನ್ನ ಸನಿಹಕೆ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್‌ 8ಕ್ಕೆ ತೆರೆ ಕಾಣಲಿದೆ ’ನಿನ್ನ ಸನಿಹಕೆ’

ಅದಾಗಲೇ ಎರಡು ಬಾರಿ ಬಿಡುಗಡೆ ದಿನಾಂಕ ಮುಂದೂಡಿರುವ ’ನಿನ್ನ ಸನಿಹಕೆ’ ಚಿತ್ರವು ಅಕ್ಟೋಬರ್‌ 8ರಂದು ಕಡೆಗೂ ತೆರೆ ಕಾಣಲು ಸಿದ್ಧವಾಗುತ್ತಿದೆ. ಏಪ್ರಿಲ್ ಹಾಗೂ ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.

ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ ಅನ್ನು ಸಡಿಲಿಕೆ ಮಾಡುವ ವೇಳೆ ಸಿನೆಮಾ ಮಂದಿರಗಳಲ್ಲಿ 100% ಸಾಮರ್ಥ್ಯದಲ್ಲಿ ವೀಕ್ಷಕರನ್ನು ಸೇರಿಸಲು ಅವಕಾಶ ಕೊಟ್ಟ ಬಳಿಕ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ. ಈ ವಿಚಾರವನ್ನು ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

ಬ್ರೆಜಿಲಿಯನ್ ಬೀದಿಕಲೆಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ನಟ ಅರ್ಜುನ್ ರಾಂಪಲ್

ಸೂರಜ್ ಗೌಡರ ನಿರ್ದೇಶನದ ಮೊದಲ ಚಿತ್ರವಾದ ʼನಿನ್ನ ಸನಿಹಕೆʼಯಲ್ಲಿ ಧನ್ಯಾ ರಾಮ್‌ಕುಮಾರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನ್ಯಾ ಡಾ. ರಾಜ್‌ಕುಮಾರ್‌ ಮೊಮ್ಮಗಳಾಗಿದ್ದು, ರಾಮ್‌ ಕುಮಾರ್‌ರ ಮಗಳಾಗಿದ್ದಾರೆ. ವಾಸುಕಿ ವೈಭವ್ ಬರೆದಿರುವ ಹಾಡುಗಳಿಗೆ ರಘು ದೀಕ್ಷಿತ್‌ ಕಾಂಪೋಸ್ ಮಾಡಿದ್ದು, ಅದಾಗಲೇ ಚಿತ್ರರಸಿಕರು ಭಾರೀ ಖುಷಿ ಪಟ್ಟು ಆಲಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...