alex Certify ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ-2 ನಲ್ಲಿ ಅಬ್ಬರಿಸಲಿದ್ದಾನೆ ವಿದೇಶಿ ವಿಲನ್..!

ಪುಷ್ಪಾ ಭಾಗ ಒಂದು ಸಕ್ಕತ್ ಸದ್ದು ಮಾಡಿದ ಸಿನಿಮಾ. ವಿಭಿನ್ನ ನಟನೆಯ ಮೂಲಕ ಅಲ್ಲು ಅರ್ಜುನ್ ಸಾಕಷ್ಟು ಜನರ ಮನ ಗೆದ್ದಿದ್ದರು. ಈ ಸಿನಿಮಾದ ಕಥೆ ಕೂಡ ಅನೇಕರನ್ನು ಆಕರ್ಷಣೆ ಮಾಡಿದ್ದು. ಸಿನಿಮಾದ ಸೀಕ್ವೆಲ್ ಗೆ ಜನ ಕಾಯ್ತಾ ಇದ್ದಾರೆ. ಇದೀಗ ಈ ಸಿನಿಮಾಗೆ ವಿದೇಶಿ ವಿಲನ್ ಎಂಟ್ರಿಯಾಗ್ತಾ ಇದ್ದಾರಂತೆ.

ಹೌದು, ಈ ಸಿನಿಮಾದಲ್ಲಿ ವಿದೇಶಿ ವಿಲನ್ ಎಂಟ್ರಿಯಾಗಲಿದ್ದಾರೆ. ಇರಾನ್ ಮೂಲದ ನಟ ಸಜ್ಜಾದ್ ಡೆಲಾಫ್ರೂಜ್ ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲಿದ್ದಾರಂತೆ. ಈಗಾಗಲೇ ಈ ನಟ ಸಲ್ಮಾನ್ ಖಾನ್ ನಟನೆಯ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರಂತೆ. ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ನಟ ಅನೇಕ ಸಿನಿಮಾದಲ್ಲಿ ವಿಭಿನ್ನ ಹಾಗೂ ಭಯಾನಕ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ. ಇದೀಗ ಪುಷ್ಪಾ-2 ನಲ್ಲೂ ಜನರಿಗೆ ಮನೋರಂಜನೆ ನೀಡಲು ಹೊರಟಿದ್ದಾರೆ. ರಕ್ತ ಚಂದನದ ಕುರಿತಾದ ಈ ಸ್ಟೋರಿ ಒಂದು ವಿಭಿನ್ನವಾದ ಕಥೆ ಕಟ್ಟಿಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...