alex Certify ಮೊದಲ ಡೇಟಿಂಗ್ ನಲ್ಲಿ ಹುಡುಗರೇ ಯಾಕೆ ಬಿಲ್ ಪಾವತಿ ಮಾಡ್ಬೇಕು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಡೇಟಿಂಗ್ ನಲ್ಲಿ ಹುಡುಗರೇ ಯಾಕೆ ಬಿಲ್ ಪಾವತಿ ಮಾಡ್ಬೇಕು…..?

ಮೊದಲ ಡೇಟಿಂಗ್ ಬಗ್ಗೆ ಪ್ರತಿಯೊಬ್ಬರಲ್ಲೂ ಭಯವಿರುತ್ತದೆ. ಏನು ಮಾಡ್ಬೇಕು, ಏನು ಮಾಡ್ಬಾರದು ಎಂಬ ಪ್ರಶ್ನೆ ಕಾಡ್ತಿರುತ್ತದೆ. ಗರ್ಲ್ ಫ್ರೆಂಡ್ ಖುಷಿಗೊಳಿಸಲು ಏನು ಮಾಡ್ಬೇಕೆಂಬ ಗೊಂದಲ ಹುಡುಗ್ರಲ್ಲಿ ಸಾಮಾನ್ಯವಾಗಿರುತ್ತದೆ. ಮೊದಲ ಡೇಟಿಂಗ್ ವೇಳೆ ಬಿಲ್ ಯಾರು ನೀಡ್ಬೇಕು ಎಂಬ ತಜ್ಞರ ಅಭಿಪ್ರಾಯವೇನು ಗೊತ್ತಾ?

ಡೇಟಿಂಗ್ ತಜ್ಞ ನೆಲ್ಲಿ ಪ್ರಕಾರ, ಹುಡುಗ ಮೊದಲ ಡೇಟಿಂಗ್ ನಲ್ಲಿ ಬಿಲ್ ಪಾವತಿಸಬೇಕು. ನೆಲ್ಲಿ ಈ ಪ್ರಶ್ನೆಯ ಕುರಿತು ವೀಡಿಯೊವನ್ನು ತಯಾರಿಸಿ ಅದನ್ನು ಟಿಕ್ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು 93 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಮೊದಲ ಡೇಟಿಂಗ್ ನಲ್ಲಿ ಬಿಲ್ ಪಾವತಿ ಮಾಡುವುದು ಹುಡುಗಿಯನ್ನು ಆಕರ್ಷಿಸುವ ಮೊದಲ ಹೆಜ್ಜೆ.

ಡೇಟಿಂಗ್ ಗೆ ಬರುವಂತೆ ಹುಡುಗಿಯನ್ನು ಕೇಳಿ ನಂತ್ರ ಬಿಲ್ ಪಾವತಿ ಮಾಡದೆ ಹೋದ್ರೆ ಹುಡುಗಿಗೆ ನಿಮ್ಮ ಮೇಲಿನ ಭಾವನೆ ಬದಲಾಗಬಹುದು. ಬಿಲ್ ಪಾವತಿ ಮಾಡಿಲ್ಲವೆಂದ್ರೆ ನೀವು ಬಿಲ್ ಪಾವತಿ ಮಾಡುವಷ್ಟು ಆರ್ಥಿಕವಾಗಿ ಸದೃಢರಲ್ಲವೆಂದು ಹುಡುಗಿ ಭಾವಿಸುತ್ತಾಳೆ. ಮುಂದಿನ ಡೇಟ್ ಗೆ ಆಕೆ ಬರದೆ ಇರಬಹುದು ಎಂದು ನೆಲ್ಲಿ ಹೇಳಿದ್ದಾರೆ. ದುಬಾರಿ ರೆಸ್ಟೋರೆಂಟ್ ಅಥವಾ ಹೊಟೇಲ್ ಬಿಲ್ ಪಾವತಿಸಲು ಸಾಧ್ಯವಿಲ್ಲ ಎನ್ನುವವರು ಪಾರ್ಕ್ ಅಥವಾ ಪಿಕ್ನಿಕ್ ಗೆ ಕರೆದುಕೊಂಡು ಹೋಗಿ ಎಂದಿದ್ದಾರೆ.

ಒಂದು ವೇಳೆ ಹುಡುಗಿ ಬಿಲ್ ಪಾವತಿಗೆ ಮುಂದಾದ್ರೆ ಅದಕ್ಕೆ ಆಸ್ಪದ ನೀಡಬೇಡಿ. ನೀವೇ ಬಿಲ್ ಪಾವತಿ ಮಾಡಿ. ಮುಂದಿನ ಬಾರಿ ಬಿಲ್ ಪಾವತಿಸಬಹುದೆಂದು ಮಾತು ಬದಲಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...