alex Certify ಮಗಳನ್ನೇ ದೇವದಾಸಿ ಮಾಡಲು ಮುಂದಾದ ಪೋಷಕರು, ಪೊಲೀಸರ ಮೊರೆ ಹೋದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳನ್ನೇ ದೇವದಾಸಿ ಮಾಡಲು ಮುಂದಾದ ಪೋಷಕರು, ಪೊಲೀಸರ ಮೊರೆ ಹೋದ ಯುವತಿ

ರಾಯಚೂರು ಜಿಲ್ಲೆ ದೇವದುರ್ಗ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪೋಷಕರೇ ಮಗಳನ್ನು ಬಲವಂತವಾಗಿ ದೇವದಾಸಿ ಪದ್ಧತಿಗೆ ನೂಕಲು ಮುಂದಾಗಿದ್ದು, ಪೋಷಕರ ವಿರುದ್ಧವೇ ಯುವತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

21 ವರ್ಷದ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲು ಪೋಷಕರೇ ಮುಂದಾದಾಗ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಕ್ಕನ ಗಂಡನೊಂದಿಗೆ ಯುವತಿ ಮದುವೆ ಮಾಡಲು ಪೋಷಕರು ಮುಂದಾಗಿದ್ದು, ಯುವತಿ ವಿರೋಧಿಸಿದಾಗ ದೇವದಾಸಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದು, ಸಿಡಿಪಿಒಗೆ ಮಾಹಿತಿ ನೀಡಿ, ಜಾಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಯುವತಿ ದೇವದುರ್ಗದ ಮಹಿಳಾ ಪುನರ್ವಸತಿ ಆಶ್ರಯ ಪಡೆದುಕೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...