alex Certify ’ಕನಸಿನಲ್ಲಿ ಬಂದು ಅತ್ಯಾಚಾರ ಮಾಡಿದ್ದಾನೆ’ ಎಂದು ಮಹಿಳೆಯಿಂದ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಕನಸಿನಲ್ಲಿ ಬಂದು ಅತ್ಯಾಚಾರ ಮಾಡಿದ್ದಾನೆ’ ಎಂದು ಮಹಿಳೆಯಿಂದ ದೂರು

Raped Me in Dreams': Bihar Woman Approaches Police Against Occultist

ಮಾಟಗಾರನೊಬ್ಬ ಕನಸಿನಲ್ಲಿ ಬಂದು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಿಹಾರ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ.

ಇಲ್ಲಿನ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಮೈದಾನದ ನಿವಾಸಿಯಾದ ಈ ಮಹಿಳೆ, ಜನವರಿಯಲ್ಲಿ ತನ್ನ ಮಗನಿಗೆ ಹುಶಾರು ತಪ್ಪಿದ ವೇಳೆ ಪ್ರಶಾಂತ್‌ ಚತುರ್ವೇದಿ ಎಂಬ ಮಾಟಗಾರರನ್ನು ಸಂಪರ್ಕಿಸಿದ್ದರು.

ಆ ವೇಳೆ ತನ್ನ ಮಗನ ಚೇತರಿಕೆಗಾಗಿ ಆ ಮಾಟಗಾರ ಮಂತ್ರವೊಂದನ್ನು ಹೇಳಿಕೊಟ್ಟು, ಶಾಸ್ತ್ರವೊಂದನ್ನು ಮಾಡಲು ತಿಳಿಸಿದ್ದ. ಆದರೆ 15 ದಿನಗಳ ಬಳಿಕ ಮಹಿಳೆಯ ಮಗ ಮೃತಪಟ್ಟಿದ್ದ.

ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದ ಪ್ರಕರಣದ ಹಿಂದಿನ ರಹಸ್ಯ ಬಯಲು

“ತನ್ನ ಮಗನ ಸಾವಿನ ಬಳಿಕ ಚತುರ್ವೇದಿ ವಾಸಿಸುವ ಇಲ್ಲಿನ ಕಾಳಿ ಬಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ತನ್ನ ಮಗ ಹೇಗೆ ಮೃತಪಟ್ಟ ಎಂದು ಪ್ರಶ್ನಿಸಿದ ವೇಳೆ, ತನ್ನನ್ನು ಅತ್ಯಾಚಾರ ಮಾಡಲು ಬಂದ ಚತುರ್ವೇದಿಯಿಂದ ಪಾರಾಗಿದ್ದೆ” ಎಂದು ಈ ಮಹಿಳೆ ತಿಳಿಸಿದ್ದಾಗಿ ಠಾಣಾಧಿಕಾರಿ ಅಂಜನಿ ಕುಮಾರ್‌ ತಿಳಿಸಿದ್ದಾರೆ.

ಸ್ಪೇನ್ ಜೈಲಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಐಟಿ ದಿಗ್ಗಜ

“ಆ ವೇಳೆ ಮಹಿಳೆ ಪೊಲೀಸ್‌ ದೂರು ಕೊಟ್ಟಿರಲಿಲ್ಲ. ಆಗಿನಿಂದ ಚತುರ್ವೇದಿ ತಮ್ಮ ಕನಸಿನಲ್ಲಿ ಯಾವಾಗಲೂ ಬಂದು ಪದೇ ಪದೇ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಆಪಾದನೆ ಮಾಡಿದ್ದಾರೆ. ಲಿಖಿತ ದೂರನ್ನು ಆಧರಿಸಿ ಚತುರ್ವೇದಿಯನ್ನು ಕರೆಯಿಸಿ ತನಿಖೆ ನಡೆಸಿದ ವೇಳೆ, ತಾನು ಆಕೆಯನ್ನು ಎಂದೂ ಭೇಟಿ ಮಾಡಿಲ್ಲ ಎಂದು ತಿಳಿಸಿದ ಹಾಗೂ ಈ ಬಗ್ಗೆ ನಮಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗದೇ ಇದ್ದ ಕಾರಣ ಆತನಿಂದ ಬಾಂಡ್ ಒಂದನ್ನು ಬರೆಯಿಸಿಕೊಂಡು ಅವನನ್ನು ಬಿಟ್ಟು ಕಳುಹಿಸಿದ್ದೇವೆ” ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...