alex Certify ನೌಕರಿ ಕಳೆದುಕೊಂಡಿದ್ರೆ ಚಿಂತೆ ಬೇಡ….! ಇಎಸ್ಐಸಿ ಈ ಸ್ಕೀಂನಲ್ಲಿ ಸಿಗ್ತಿದೆ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೌಕರಿ ಕಳೆದುಕೊಂಡಿದ್ರೆ ಚಿಂತೆ ಬೇಡ….! ಇಎಸ್ಐಸಿ ಈ ಸ್ಕೀಂನಲ್ಲಿ ಸಿಗ್ತಿದೆ ಹಣ

ಕೊರೊನಾ ಸಂದರ್ಭದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಿಎಂಐಇ ಪ್ರಕಾರ, ಜೂನ್ 21 ರ ಹೊತ್ತಿಗೆ ಭಾರತದಲ್ಲಿ ಸರಾಸರಿ ನಿರುದ್ಯೋಗ ದರವು ಶೇಕಡಾ 10.6 ರಷ್ಟಿದೆ. ಜೂನ್ 7 ರಂದು ನಿರುದ್ಯೋಗ ದರ ಶೇಕಡಾ 12.99 ಕ್ಕೆ ತಲುಪಿತ್ತು. ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇಎಸ್ಐಸಿಯ ಆರ್ ಜಿ ಎಸ್ಕೆ ವೈ  ಯೋಜನೆಯಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದು.

ಇದು ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ್ ಯೋಜನೆಯಾಗಿದೆ. ನಿರುದ್ಯೋಗ ಭತ್ಯೆ ನೀಡುವ ಈ ಯೋಜನೆಯನ್ನು 2005 ರಲ್ಲಿ ಶುರು ಮಾಡಲಾಯ್ತು. ವ್ಯಕ್ತಿ, ನೌಕರರ ರಾಜ್ಯ ವಿಮಾ ಯೋಜನೆ ವ್ಯಾಪ್ತಿಗೆ ಬಂದಿದ್ದಲ್ಲಿ ಅವನು ನಿರುದ್ಯೋಗಿಯಾದಾಗ ಅವನಿಗೆ ಆರ್ಥಿಕ ಸಹಾಯ ಸಿಗಲಿದೆ. ವ್ಯಕ್ತಿಯ ಸಂಬಳದ ಶೇಕಡಾ 50 ರಷ್ಟು ಹಣವನ್ನು ನಿರುದ್ಯೋಗ ಭತ್ಯೆಯಾಗಿ ನೀಡಲಾಗುತ್ತದೆ. ಈ ಸಹಾಯವನ್ನು ಗರಿಷ್ಠ 2 ವರ್ಷಗಳವರೆಗೆ ನೀಡಲಾಗುತ್ತದೆ.

ಈ ಯೋಜನೆ ಲಾಭ ಪಡೆಯಲು ಕೆಲವೊಂದು ಷರತ್ತುಗಳಿವೆ. ಇಎಸ್ಐಸಿ ಸ್ಕೀಂ ಅಡಿ ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ ಯೋಜನೆ ಬರುತ್ತದೆ. ಇಎಸ್ಐಸಿ ವಿಮೆ ಮಾಡಿರುವ  ಉದ್ಯೋಗಿಗೆ ಮಾತ್ರ ಇದರ ಲಾಭ ಸಿಗಲಿದೆ. ಕೆಲಸ ಕಳೆದುಕೊಂಡಿದ್ದರೆ ಅಥವಾ ಕಾರ್ಖಾನೆ ಬಂದ್ ಆಗಿದ್ದಲ್ಲಿ ಮಾತ್ರ ಇದ್ರ ಲಾಭ ಪಡೆಯಬಹುದು.

ವಿಮೆ ಮಾಡಿದ ವ್ಯಕ್ತಿ ಶಾಖಾ ಕಚೇರಿಯಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿಸಬೇಕು. ಶಾಖಾ ಕಚೇರಿ ಈ ಅರ್ಜಿಯನ್ನು ಪರಿಶೀಲಿಸಿ ಎಸ್‌ಆರ್‌ಒ ಅಥವಾ ಆರ್‌ಒಗೆ ರವಾನಿಸುತ್ತದೆ. ಇದ್ರ ನಂತ್ರ ಭತ್ಯೆ, ನಿರುದ್ಯೋಗಿಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...