alex Certify ಹೊಸ ವರ್ಷದ ಆರಂಭದಲ್ಲೇ ವಿದೇಶ ಪ್ರವಾಸಕ್ಕೆ ಅಣಿಯಾದ ಪ್ರಧಾನಿ ಮೋದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದ ಆರಂಭದಲ್ಲೇ ವಿದೇಶ ಪ್ರವಾಸಕ್ಕೆ ಅಣಿಯಾದ ಪ್ರಧಾನಿ ಮೋದಿ..!

ದುಬೈ ಎಕ್ಸ್​ಪೋ 2020ರಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ 2022ರ ಆರಂಭದಲ್ಲಿ ಅರಬ್​ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಂದಹಾಗೆ ಇದು ಹೊಸ ವರ್ಷದಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ ಭೇಟಿ ಎನಿಸಿಕೊಳ್ಳಲಿದೆ.

ಭಾರತ ಹಾಗೂ ಅರಬ್​ ರಾಷ್ಟ್ರಗಳ ನಡುವಿನ ವ್ಯಾಪಾರ ಹಾಗೂ ವ್ಯವಹಾರಗಳಿಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ಮೋದಿ ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ದುಬೈ ಎಕ್ಸ್​ಪೋ 2020ಯನ್ನು ಹೊರತುಪಡಿಸಿ ಪ್ರಧಾನಿ ಮೋದಿ ಯುಎಇ ನಾಯಕರ ಜೊತೆಯಲ್ಲಿ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ.

ಇಂಡಿಯಾ ಪೆವಿಲಿಯನ್​​ನಲ್ಲಿ ಭಾರತದ ಹಿಂದಿನ, ಪ್ರಸ್ತುತ ಹಾಗೂ ಭವಿಷ್ಯದ 360 ಡಿಗ್ರಿ ಡಿಜಿಟಲ್​ ರಿಕ್ರಿಯೇಷನ್​ನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್​ ಗೋಯಲ್​ ಉದ್ಘಾಟಿಸಿದ್ರು.

ವಿದೇಶಾಂಗ ಸಚಿವ ಎಸ್​. ಜೈಶಂಕರ್​, ನಾಗರಿಕ ವಿಮಾನಯಾನ ಸಚಿವ ಹರ್ದೀಪ್​ ಪುರಿ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮುರುಳೀಧರನ್​​ ಸೇರಿದಂತೆ ವಿವಿಧ ನಾಯಕರು ಎಕ್ಸ್​ಪೋಗೆ ಭೇಟಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...