alex Certify ವಿರೋಧದ ಬಳಿಕ ಮಾಡೆಲ್‌ ವಿರುದ್ಧ ಕ್ರಮಕ್ಕೆ ಮುಂದಾದ ಪಾಕ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರೋಧದ ಬಳಿಕ ಮಾಡೆಲ್‌ ವಿರುದ್ಧ ಕ್ರಮಕ್ಕೆ ಮುಂದಾದ ಪಾಕ್​…..!

ಪಾಕಿಸ್ತಾನದ ಕರ್ತಾರ್​ಪುರದ ಗುರುದ್ವಾರ ಸಾಹಿಬ್​ ಕರ್ತಾರ್​ಪುರದಲ್ಲಿ ತಲೆಯ ಮೇಲೆ ಸ್ಕಾರ್ಫ್​ ಧರಿಸದೇ ಫೋಟೋಗೆ ಪೋಸ್​​ ನೀಡಿದ ಮಾಡೆಲ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪಾಕಿಸ್ತಾನದ ಪ್ರಸಿದ್ಧ ಫ್ಯಾಶನ್​ ಬ್ರ್ಯಾಂಡ್​ ಮನ್ನತ್​ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ .

ಕರ್ತಾಪುರ ಸಾಹಿಬ್​ ಗುರುದ್ವಾರವು ಪಾಕಿಸ್ತಾನದಲ್ಲಿ ನೆಲೆಸಿರುವ ಸಿಖ್ಖರ ಪವಿತ್ರ ಧಾರ್ಮಿಕ ಸ್ಥಳವಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ಗುರುದ್ವಾರಗಳಿಗೆ ಭೇಟಿ ನೀಡಬೇಕು ಎಂದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳೋದು ಕಡ್ಡಾಯವಾಗಿದೆ.

ಇಂಟರ್ನೆಟ್​ನಲ್ಲಿ ಸಿಖ್ಖರು ಮಾಡೆಲ್​ ಹಾಗೂ ಮನ್ನತ್​ ಬ್ರ್ಯಾಂಡ್​ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಂತೆಯೇ ಎಚ್ಚೆತ್ತ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಸರ್ಕಾರವು ಈ ಸಂಬಂಧ ತನಿಖೆಗೆ ಆದೇಶ ನೀಡಿದೆ. ಹಾಗೂ ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪಂಜಾಬ್​ ಪ್ರಾಂತ್ಯದ ಸಿಎಂ ಉಸ್ಮಾನ್​​ ಬುಜ್ದಾರ್​​​ ಈ ಘಟನೆ ಸಂಬಂಧ ಕಠಿಣ ನೋಟಿಸ್​ ಜಾರಿ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ಘಟನೆ ಸಂಬಂಧ ಸಂಪೂರ್ಣ ವಿವರಣೆ ಕೇಳಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...