alex Certify ಕೋವಿಡ್ ಲಸಿಕೆ ನೋಂದಣಿ ಕುರಿತ ಊಹಾಪೋಹಗಳಿಗೆ ಆರೋಗ್ಯ ಸಚಿವಾಲಯದಿಂದ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ನೋಂದಣಿ ಕುರಿತ ಊಹಾಪೋಹಗಳಿಗೆ ಆರೋಗ್ಯ ಸಚಿವಾಲಯದಿಂದ ತೆರೆ

ಕೋವಿಡ್ ಲಸಿಕೆಗಳನ್ನು ಪಡೆಯಲು ಮೊಬೈಲ್ ಫೋನ್ ಹಾಗೂ ವಿಳಾಸದ ಸಾಕ್ಷ್ಯಗಳೊಂದಿಗೆ, ಲಸಿಕಾ ಕಾರ್ಯಕ್ರಮಕ್ಕೆ ಡಿಜಿಟಲಿ ನೋಂದಣಿಯಾಗಲು, ಅಂತರ್ಜಾಲ ಸಂಪರ್ಕದೊಂದಿಗೆ ಸ್ಮಾರ್ಟ್‌ಫೋನ್‌ ಕಡ್ಡಾಯವೆಂಬ ಊಹಾಪೋಹಗಳಿಗೆ ಕೇಂದ್ರ ಆರೋಗ್ಯ ಮಂತ್ರಾಲಯ ತೆರೆ ಎಳೆದಿದೆ.

“ಕೋವಿಡ್ ಲಸಿಕೆ ಪಡೆಯಲು ಮೊಬೈಲ್‌ ಫೋನ್ ಇರುವುದು ಕಡ್ಡಾಯವಲ್ಲ ಹಾಗೂ ವಿಳಾಸ ಸಾಕ್ಷ್ಯ ತೋರುವುದೂ ಸಹ ಕಡ್ಡಾಯವಲ್ಲ” ಎಂದು ಪ್ರಕಟಣೆಯೊಂದರ ಮೂಲಕ ಸಚಿವಾಲಯ ಸ್ಪಷ್ಟಪಡಿಸಿದೆ.

 ಡೆಲ್ಟಾ ಪ್ಲಸ್ ಆತಂಕ; ಗಡಿ ಜಿಲ್ಲೆಗಳಲ್ಲಿ ಎಚ್ಚರವಿರಲಿ; ಆರೋಗ್ಯ ಇಲಾಖೆ ಸೂಚನೆ

ಬಳಕೆದಾರರಿಗೆ ಸುಲಭದಲ್ಲಿ ಅರ್ಥವಾಗಲೆಂದು ಕೋ-ವಿನ್ ಪೋರ್ಟಲ್‌ ಕನ್ನಡ ಸೇರಿದಂತೆ ದೇಶದ 12 ಭಾಷೆಗಳಲ್ಲಿ ಲಭ್ಯವಿದೆ ಎಂದು ಸಚಿವಾಲಯ ಇದೇ ವೇಳೆ ತಿಳುವಳಿಕೆ ನೀಡಿದೆ.

ಆಧಾರ್‌ ಕಾರ್ಡ್, ಮತದಾರರ ಗುರುತಿನ ಕಾರ್ಡ್, ಪಡಿತರ ಕಾರ್ಡ್, ದಿವ್ಯಾಂಗ ಗುರುತಿನ ಕಾರ್ಡ್ ಸೇರಿದಂತೆ ಒಂಬತ್ತು ವಿವಿಧ ರೀತಿಯ ಗುರುತಿನ ಸಾಕ್ಷ್ಯಗಳಲ್ಲಿ ಒಂದನ್ನು ಲಸಿಕೆ ಹಾಕುವ ವೇಳೆ ಪ್ರಸ್ತುತಪಡಿಸಬೇಕಾಗುತ್ತದೆ. ಇವುಗಳಲ್ಲಿ ಒಂದನ್ನೂ ಹೊಂದದಿರುವ ಮಂದಿಗೂ ಸಹ ಲಸಿಕೆ ಹಾಕಲು ಆನ್‌-ಸೈಟ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದುವರೆಗೂ ಹಾಕಲಾಗಿರುವ ಲಸಿಕೆಯ ಡೋಸ್‌ಗಳಲ್ಲಿ 80%ರಷ್ಟನ್ನು ಆನ್‌-ಸೈಟ್‌ನಲ್ಲೇ ಹಾಕಲಾಗಿದೆ ಎಂದು ಸಚಿವಾಲಯ ತನ್ನ ಪ್ರಕಟಣೆ ಮೂಲಕ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...