alex Certify ʼಕೊರೊನಾʼದಿಂದ ಗುಣಮುಖರಾದವರಿಗೆ ಮತ್ತೊಂದು ಶಾಕ್: ಬಹುತೇಕರನ್ನು ಕಾಡುತ್ತಿದೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಗುಣಮುಖರಾದವರಿಗೆ ಮತ್ತೊಂದು ಶಾಕ್: ಬಹುತೇಕರನ್ನು ಕಾಡುತ್ತಿದೆ ಈ ಸಮಸ್ಯೆ

ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದೆ. ಆದ್ರೆ ಈಗಾಗಲೇ ಕೊರೊನಾಗೆ ತುತ್ತಾದವರು, ಕೊರೊನಾ ಕಡಿಮೆಯಾದ್ರೂ ಅದರ ಅಡ್ಡಪರಿಣಾಮದಿಂದ ಹೊರಗೆ ಬಂದಿಲ್ಲ. ಕೊರೊನಾ ನಂತ್ರ ಜನರಿಗೆ ಅನೇಕ ಸಮಸ್ಯೆ ಕಾಡ್ತಿದೆ. ಕಿಡ್ನಿ, ಯಕೃತ್ತು, ಹೃದಯ, ಶ್ವಾಸಕೋಶ, ಕಣ್ಣಿನ ಸಮಸ್ಯೆ ನಂತ್ರ ಕೊರೊನಾ ಪರಿಣಾಮ ಮೂಳೆಗಳ ಮೇಲೂ ಕಾಣಿಸಿಕೊಳ್ಳುತ್ತಿದೆ. ಅನೇಕರಲ್ಲಿ ಮೂಳೆ ರೋಗ ಆಸ್ಟಿಯೊಪೊರೋಸಿಸ್ ಕಾಣಿಸಿಕೊಳ್ತಿದೆ.

ಹಾಟ್ ಫೋಟೋದಲ್ಲಿ ಸೆಕ್ಸಿ ಫಿಗರ್ ತೋರಿಸಿದ ಬಿಪಾಷಾ ಬಸು

ಇದು ಹೆಚ್ಚಾಗಿ ಮಹಿಳೆಯರನ್ನು ಕಾಡ್ತಿದೆ. ನಿಧಾನವಾಗಿ ಇಡೀ ದೇಹವನ್ನು ಇದು ಆವರಿಸಲಿದೆ. ಇದ್ರ ಪರಿಣಾಮ ಅಪಾಯಕಾರಿಯಾಗಿರಲಿದೆ ಎಂದು ತಜ್ಞರು ಹೇಳಿದ್ದಾರೆ. ಇದುವರೆಗೆ ಭಾರತದಲ್ಲಿ 1 ಕೋಟಿಗೂ ಹೆಚ್ಚು ರೋಗಿಗಳ ಇದ್ರಿಂದ ಬಳಲುತ್ತಿದ್ದಾರೆ. ಕೊರೊನಾ ಸೇರಿದಂತೆ ಬೇರೆ ರೋಗಕ್ಕೆ ಸ್ಟಿರಾಯ್ಡ್ ಸೇವನೆ ಮಾಡುತ್ತಿರುವ ರೋಗಿಗಳಿಗೆ ಮುಂದಿನ ದಿನಗಳಲ್ಲಿ ಈ ಮೂಳೆ ರೋಗ ಕಾಡುವ ಅಪಾಯ ಹೆಚ್ಚಿದೆ.

ಆಸ್ಟಿಯೊಪೊರೋಸಿಸ್, ನಿರಂತರವಾಗಿ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಮೂಳೆಗಳು ಟೊಳ್ಳಾಗುತ್ತವೆ. ಯಾವುದೇ ಲಕ್ಷಣ ಕಾಣಿಸಿಕೊಳ್ಳದ ಕಾರಣ ಇದನ್ನು ಮೂಕ ರೋಗ ಎಂದೂ ಕರೆಯುತ್ತಾರೆ. 30 ವರ್ಷಗಳ ನಂತರ, ಮಾನವ ದೇಹದಲ್ಲಿ ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತದೆ. ಆಸ್ಟಿಯೊಪೊರೋಸಿಸ್ ಸಂದರ್ಭದಲ್ಲಿ, ಮೂಳೆ ಮುರಿಯುವ ಸಾಧ್ಯತೆ ಹೆಚ್ಚು. ಸೊಂಟ, ಮೊಣಕಾಲು, ಬೆನ್ನುಮೂಳೆಯ ಮುರಿತ ಅತ್ಯಂತ ಅಪಾಯಕಾರಿ.

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಭಾರತದಲ್ಲಿ ಮಹಿಳೆಯರ ಈ ಸಮಸ್ಯೆಗೆ ಸಾಕಷ್ಟು ಕಾರಣವಿದೆ. ಭಾರತದಲ್ಲಿ ಮಹಿಳೆಯರಲ್ಲಿ ಋತುಬಂಧದ ಸರಾಸರಿ ವಯಸ್ಸು 47 ವರ್ಷವಾಗಿದೆ. ವಿದೇಶಗಳಲ್ಲಿ ಇದು 51 ವರ್ಷವಾಗಿದೆ. ಭಾರತದಲ್ಲಿ ಜೀವಿತಾವಧಿ ವಯಸ್ಸು ಹೆಚ್ಚಿರುತ್ತದೆ. ಕೊರೊನಾ ಸಂದರ್ಭದಲ್ಲಿ ಸ್ಟಿರಾಯ್ಡ್ ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಪೌಷ್ಟಿಕ ಆಹಾರದ ಕೊರತೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ. ವಿಟಮಿನ್ ಡಿ ಕೊರತೆ. ದೈಹಿಕ ವ್ಯಾಯಾಮದ ಕೊರತೆ ಇದಕ್ಕೆ ಕಾರಣವಾಗಿದೆ.

ಸೂಕ್ತ ಸಮಯದಲ್ಲಿ ಪರೀಕ್ಷೆ ಮಾಡಿಸಿಕೊಂಡು ಇದಕ್ಕೆ ಚಿಕಿತ್ಸೆ ಪಡೆಯಬಹುದು. ಹಾಗೆ ವ್ಯಾಯಾಮ, ಕ್ಯಾಲ್ಸಿಯಂ, ಕಬ್ಬಿಣದ ಆಹಾರವನ್ನು ಸೇವನೆ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...