alex Certify ಮಿಲ್ಖಾ ಸಿಂಗ್ ಬದಲು ಫರ್ಹಾನ್‌ ಅಖ್ತರ್ ಫೋಟೋ ಹಾಕಿದ ಸ್ಟೇಡಿಯಂ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಲ್ಖಾ ಸಿಂಗ್ ಬದಲು ಫರ್ಹಾನ್‌ ಅಖ್ತರ್ ಫೋಟೋ ಹಾಕಿದ ಸ್ಟೇಡಿಯಂ..!

ಭಾರತದ ಅಥ್ಲೀಟ್​ ದಿಗ್ಗಜ, ಫ್ಲೈಯಿಂಗ್​ ಸಿಂಗ್ ಖ್ಯಾತಿಯ ಮಿಲ್ಖಾ ಸಿಂಗ್​ ಕಳೆದ ಶುಕ್ರವಾರ ಕೊರೊನಾದಿಂದಾಗಿ ಸಾವನ್ನಪ್ಪಿದ್ದರು. ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಅನೇಕರು ತಮ್ಮದೇ ಆದ ರೀತಿಯಲ್ಲಿ ಫ್ಲೈಯಿಂಗ್​ ಸಿಖ್​ಗೆ ಅಂತಿಮ ನಮನ ಸಲ್ಲಿಸಿದ್ದಾರೆ.‌

ಅಲ್ಲದೇ ಮಿಲ್ಖಾ ಸಿಂಗ್​ರ ನಿಧನದ ವಾರ್ತೆ ಕೇಳಿದ ಬಳಿಕ ಅವರ ಆತ್ಮಕಥೆ ಆಧಾರಿತ ಸಿನಿಮಾ ʼಭಾಗ್​ ಮಿಲ್ಖಾ ಭಾಗ್ʼ​ ಸಿನಿಮಾವನ್ನ ಮತ್ತೆ ವೀಕ್ಷಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್​ ನಟ ಫರ್ಹಾನ್‌​ ಅಖ್ತರ್​ ಮಿಲ್ಖಾ ಸಿಂಗ್​ರ ಪಾತ್ರವನ್ನ ನಿರ್ವಹಿಸಿದ್ದರು.

ನೋಯ್ಡಾದ ಸ್ಟೇಡಿಯಂ ಒಂದರಲ್ಲಿ ಮಿಲ್ಖಾ ಸಿಂಗ್​​ರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಫರ್ಹಾನ್‌ ಅಖ್ತರ್​ ಮಿಲ್ಖಾ ಸಿಂಗ್​ ಪಾತ್ರ ನಿರ್ವಹಿಸಿರುವ ಫೋಟೋವನ್ನೇ ಕಟೌಟ್​ ಮಾಡಿ ಹಾಕಲಾಗಿದೆ.

ಈ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಪತ್ರಕರ್ತೆ ಅನಿಷಾ ದತ್ತಾ ಶೇರ್​ ಮಾಡಿದ್ದಾರೆ. ಈ ಫೋಟೋ ಶೇರ್​ ಮಾಡಿರುವ ಅನಿಷಾ, ನೋಯ್ಡಾ ಅಥಾರಿಟಿ ದಯಮಾಡಿ ಫರ್ಹಾನ್‌​ ಅಖ್ತರ್​ರ ಫೋಟೋವನ್ನ ತೆರವುಗೊಳಿಸಿ ಮಿಲ್ಖಾ ಸಿಂಗ್​​ರ ಫೋಟೋವನ್ನ ಹಾಕುವಂತೆ ಶೀರ್ಷಿಕೆಯಲ್ಲಿ ಮನವಿ ಮಾಡಿದ್ದಾರೆ. ಈ ಫೋಟೋ ಟ್ವಿಟರ್​ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ವೈರಲ್​ ಆಗಿದೆ. ಈ ರೀತಿಯಲ್ಲಿ ಅಂತಿಮ ನಮನ ಸಲ್ಲಿಸುವ ಮೂಲಕ ನೋಯ್ಡಾ, ಅಥ್ಲೀಟ್​ ದಿಗ್ಗಜನಿಗೆ ಅವಮಾನ ಎಸಗಿದೆ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...