alex Certify ಹುಟ್ಟುಹಬ್ಬ ಆಚರಿಸುವಾಗ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬ ಆಚರಿಸುವಾಗ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ: ವಿಡಿಯೋ ವೈರಲ್

ಪ್ರತಿಯೊಬ್ಬರಿಗೂ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಅಥವಾ ತುಂಬಾ ಸ್ಪೆಷಲ್ ಆಗಿ ಆಚರಿಸಬೇಕೆಂಬ ಆಸೆಯಿರುತ್ತದೆ. ಹಾಗೆಯೇ ಅಮೆರಿಕನ್‌ ನಟಿ ತನ್ನ 40ನೇ ಹುಟ್ಟುಹಬ್ಬ ಆಚರಿಸಿದಾಗ ನಡೆದ ಆಕಸ್ಮಿಕ ಘಟನೆಗೆ ಶಾಕ್ ಆಗಿದ್ದಾಳೆ.

ಹೌದು, ನಿಕೋಲ್ ರಿಚಿ ಎಂಬ ನಟಿ 40ನೇ ಹುಟ್ಟಹಬ್ಬವನ್ನು ಆಚರಿಸಿದ್ದಾಳೆ. ಕೇಕ್ ನಲ್ಲಿ ತನ್ನ ಬಾಲ್ಯದ ಫೋಟೋ ಕಂಡು ಖುಷಿಪಟ್ಟಿದ್ದಾಳೆ. ಇನ್ನೇನು ಕ್ಯಾಂಡಲ್ ಆರಿಸಿ ಕೇಕ್ ಕಟ್ ಮಾಡಬೇಕಿತ್ತು ಅಷ್ಟೇ….. ಆದರೆ, ಈಕೆ ಕ್ಯಾಂಡಲ್ ಆರಿಸುತ್ತಿದ್ದಂತೆ ಏಕಾಏಕಿ ಬೆಂಕಿ ರಿಚಿಯ ಕೂದಲನ್ನು ಹೊತ್ತಿಕೊಂಡಿದೆ. ಇದರಿಂದ ಗಾಬರಿಯಾದ ರಿಚಿ ಜೋರಾಗಿ ಕಿರುಚಿದ್ದಾಳೆ.

ಕೂಡಲೇ ರಿಚಿ ಕೂದಲಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ಆರಿಸಲಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ‘ಅದು ಬಿಸಿಯಾಗಿದೆ’ ಎಂದು ರಿಚಿ ಪತಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...