alex Certify ಪೆಟ್ರೋಲ್ ಬಂಕ್‌ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್ ಬಂಕ್‌ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್

ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸ್ಟಾರ್ಟ್ಅಪ್ ಬೌನ್ಸ್ ತನ್ನದೇ ನಿರ್ಮಾಣದ ಮೊದಲ ಇ-ಸ್ಕೂಟರ್‌ ಆದ ಇನ್ಫಿನಿಟಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಪಾರ್ಕಿಂಗ್ ಪರಿಹಾರಗಳನ್ನು ನೀಡುವ ಪ್ಲಾಟ್‌ಫಾರಂ ಪಾರ್ಕ್+ ಜೊತೆಗೆ ಸಹಯೋಗ ಮಾಡಿಕೊಂಡಿರುವ ಬೌನ್ಸ್‌, 10ಕ್ಕಿಂತ ಹೆಚ್ಚು ನಗರಗಳ 3,500‌ ರಷ್ಟು ಸ್ಥಳಗಳಲ್ಲಿ ಬ್ಯಾಟರಿ ಬದಲಾವಣೆಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ.

ಈ ಸ್ಮಾರ್ಟ್ ಸವಲತ್ತು ವಸತಿ ಸಮುದಾಯಗಳು, ಪಾರ್ಕಿಂಗ್ ನಿಲ್ದಾಣಗಳು, ಮಾಲ್‌ಗಳು, ಕಾರ್ಪೋರೇಟ್ ಕಚೇರಿಗಳು ಸೇರಿದಂತೆ ಜನಸಮೂಹ ಸೇರುವ ಅನೇಕ ಜಾಗಗಳಲ್ಲಿ ಲಭ್ಯವಿರುವಂತೆ ಮಾಡಲು ಬೌನ್ಸ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂಥ ಜಾಗಗಳನ್ನು ಲೊಕೇಟ್ ಮಾಡಲು ಬೌನ್ಸ್‌‌ ಅಪ್ಲಿಕೇಶನ್ ಅಥವಾ ಪಾರ್ಕ್+ ಅಪ್ಲಿಕೇಶನ್ ಉಪಯೋಗಕ್ಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳು ಇಂಧನ ಭರ್ತಿ ನಿಲ್ದಾಣಗಳಂತೆ ಕೆಲಸ ಮಾಡಲಿವೆ. ಬೌನ್ಸ್ ಬ್ಯಾಟರಿ ನಿಲ್ದಾಣಗಳಲ್ಲಿ ಚಾರ್ಜ್ ಆಗಿ ಸಿದ್ಧವಿರುವ ಬ್ಯಾಟರಿಗಳು ಲಭ್ಯವಿರಲಿದ್ದು, ಗ್ರಾಹಕರು ಇವುಗಳನ್ನು ತಮ್ಮಲ್ಲಿರುವ ಬ್ಯಾಟರಿಗಳೊಂದಿಗೆ ಸುಲಭವಾಗಿ ಬದಲಿಸಿಕೊಳ್ಳಬಹುದು. ಈ ವ್ಯವಸ್ಥೆಯಿಂದ ಗ್ರಾಹಕರು ತಮ್ಮ ಬ್ಯಾಟರಿಗಳು ಚಾರ್ಜ್ ಆಗಲು ಕಾಯಬೇಕಾದ ಅಗತ್ಯವಿರುವುದಿಲ್ಲ ಎಂದು ಬೌನ್ಸ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...