alex Certify ವಾಹನ ಸವಾರರಿಗೊಂದು ಬಹುಮುಖ್ಯ ಮಾಹಿತಿ; ಬದಲಾಗಲಿದೆ ಟೈರ್‌ ವಿನ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೊಂದು ಬಹುಮುಖ್ಯ ಮಾಹಿತಿ; ಬದಲಾಗಲಿದೆ ಟೈರ್‌ ವಿನ್ಯಾಸ

ಬೋರ್ ಆದ್ರೆ ಸಾಕು ಜನ ಬೈಕ್ ಇಲ್ಲಾ, ಕಾರು ತೆಗೆದುಕೊಂಡು ಲಾಂಗ್ ರೈಡ್ ಹೊರಟು ಬಿಡ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ಕೆಲಸಕ್ಕೂ ಜನರು ವಾಹನಗಳ ಮೇಲೆ ಡಿಪೆಂಡ್‌‌ ಆಗಿರ್ತಾರೆ. ನೀವು ಕೂಡಾ ವಾಹನ ಪ್ರೀಯರಾಗಿದ್ದರೆ ಈ ಸುದ್ದಿ ನಿಮಗಾಗಿ ಅನ್ನೋದು ಗ್ಯಾರಂಟಿ.

ಇದೇ ಅಕ್ಟೋಬರ್ 1, 2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ ( ಎಂವಿಎ) ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಟೈರ್ ವಿನ್ಯಾಸ ಕೂಡಾ ಸೇರಿದೆ. ಅಕ್ಟೋಬರ್ 1ರಿಂದ ಹೊಸ ವಿನ್ಯಾಸದ ಟೈರ್‌ಗಳು ದೇಶದಲ್ಲಿ ಬರಲು ಪ್ರಾರಂಭಿಸಲಿವೆ. ಇದು ಹೊಸ ಯೋಜನೆಯಾಗಿದ್ದು, ಈ ರೀತಿಯ ಟೈರ್ ಅಳವಡಿಸಿಕೊಳ್ಳಲು ವಾಹನ ಮಾಲೀಕರಿಗೆ ಸಾಕಷ್ಟು ಸಮಯಾವಕಾಶ ಕೂಡಾ ನೀಡಲಾಗುವುದು. ಈ ಹೊಸ ವಿನ್ಯಾಸ ಟೈರ್‌ಗಳನ್ನು 1ನೇ ಏಪ್ರಿಲ್ 2023 ರಿಂದ ಪ್ರತಿ ವಾಹನದಲ್ಲಿ ಕಡ್ಡಾಯವಾಗಿರಲಿದೆ. ಈ ನಿಯಮ ಏನಾದರೂ ನಿರ್ಲಕ್ಷಿಸಿದ್ದೇ ಆದರೆ ದಂಡ ವಿಧಿಸಲಾಗುವುದು.

ಇನ್ನು ಮುಂದೆ ಟೈರ್ ಖರೀದಿಸುವಾಗ ಸ್ಟಾರ್ ರೇಟಿಂಗ್ ಕೂಡ ಕಡ್ಡಾಯವಾಗಿರುತ್ತೆ. ಮೋಟಾರು ವಾಹನ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಸರ್ಕಾರ ಇದೀಗ ಟೈರ್‌ಗಳಿಗೆ ಸ್ಟಾರ್ ರೇಟಿಂಗ್‌ನ ಕಡ್ಡಾಯಗೊಳಿಸಿದೆ. ಹೊಸ ಸೌಲಭ್ಯದ ಅಡಿಯಲ್ಲಿ, ಗ್ರಾಹಕರು ಅದನ್ನು ಖರೀದಿಸುವ ಮೊದಲು ಟೈರ್‌ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ.

ಟೈರ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಾಡಿದ ಬದಲಾವಣೆಗಳ ಅಡಿಯಲ್ಲಿ, ಇದೀಗ ಟೈರ್‌ಗಳಿಗೆ ಮೂರು ಮಾನದಂಡಗಳನ್ನ ನಿಗದಿಪಡಿಸಲಾಗಿದೆ. ಈ ಮೂರು ನಿಯತಾಂಕಗಳು ರೋಲಿಂಗ್ ರೆಸಿಸ್ಟೆನ್ಸ್, ವೆಟ್‌ ಗ್ರಿಪ್‌ ಮತ್ತು ರೋಲಿಂಗ್ ಸೌಂಡ್ ಎಮಿಶನ್ಸ್, ಟೈರ್ ಕಂಪನಿಗಳು ಇದೀಗ ಈ ಮೂರು ಮಾನದಂಡಗಳನ್ನು ಅನುಸರಿಸಬೇಕಾಗಿದೆ ಮತ್ತು ಬಿಐಎಸ್ ಮಾನದಂಡಗಳ ಆಧಾರದ ಮೇಲೆ ಟೈರ್‌ಗಳನ್ನು ತಯಾರಿಸಬೇಕು. ಹೊಸ ವ್ಯವಸ್ಥೆಯಿಂದ ತಯಾರಿಸಲಾಗುವ ಟೈರ್‌ಗಳು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿರಲಿದೆ.

ಇನ್ನು ಮುಂದೆ ಟೈರ್ ತಯಾರಕ ಕಂಪನಿಗಳು ಈ 3 ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಟೈರ್ ತಯಾರಿಸಬೇಕಾಗಿದೆ.

ರೋಲಿಂಗ್ ರೆಸಿಸ್ಟೆನ್ಸ್: ಅಂದರೆ ಕಾರು ಅಥವಾ ವಾಹನವನ್ನು ಎಳೆಯಲು ಅಥವಾ ಪುಲ್ ಮಾಡಲು ಬಳಸುವ ಶಕ್ತಿ. ಪ್ರತಿರೋಧ ಕಡಿಮೆ ಇದ್ದರೆ ಟೈರ್ ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುತ್ತೆ.

ವೆಟ್‌ ಗ್ರಿಪ್‌: ಒದ್ದೆಯಾದ ರಸ್ತೆಗಳಲ್ಲಿ ಟೈರ್‌ಗಳಲ್ಲಿ, ವೆಟ್ ಗ್ರಿಪ್ ಟೈರ್ ಮೇಲ್ಮೈ ಮತ್ತು ರೇಸ್ ಟ್ರಾಕ್ ನಡುವಿನ ಘರ್ಷಣೆಯಾಗಿದೆ. ಹೊಸ ವಿನ್ಯಾಸದಲ್ಲಿ ಇದನ್ನು ಸುಧಾರಿಸಲಾಗಿದೆ.

ರೋಲಿಂಗ್ ಸೌಂಡ್ ಎಮಿಷನ್ಸ್: ಟೈರ್ ಹಳೆಯದಾದಾಗ ವಾಹನ ಚಾಲನೆಯಲ್ಲಿ ಇರುವಾಗ ಟೈರ್‌ನಿಂದ ಶಬ್ದ ಬರುವುದು ಕಾಮನ್. ಇಂತಹ ಶಬ್ದವನ್ನ ಕಂಟ್ರೋಲ್ ಮಾಡುವ ವಿನ್ಯಾಸದಲ್ಲಿ ಹೊಸ ಟೈರ್ ತಯಾರಿಸುವಂತೆ ಸರ್ಕಾರ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...