
ಶಿವಮೊಗ್ಗ: ಸಮೀಪದ ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನವಾಗಿದೆ. ನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತಾಯಿಯಿಂದ ಬೇರೆಯಾಗಿದ್ದ ಹೆಣ್ಣು ಕರಿ ಚಿರತೆ ಮರಿ ತಂದು ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎರಡು ವರ್ಷದ ಕರಿ ಚಿರತೆ ಮರಿ ಕುಮಟಾ ತಾಲೂಕಿನ ಕತಗಾಲ ಅರಣ್ಯ ವಲಯದಲ್ಲಿ ತಾಯಿಯಿಂದ ಬೇರ್ಪಟ್ಟು ಸೇತುವೆ ಬಳಿ ನಿತ್ರಾಣವಾಗಿ ಮಲಗಿತ್ತು. ಸಾರ್ವಜನಿಕರು ಚಿರತೆ ಸ್ಥಿತಿಯ ಕುರಿತಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತ್ಯಾವರೆಕೊಪ್ಪದ ಹುಲಿ ಸಿಂಹಧಾಮಕ್ಕೆ ಮಾಹಿತಿ ನೀಡಿದ್ದಾರೆ.
ಡಿಸಿಎಫ್ ಯೋಗೀಶ್ ಮತ್ತು ತಂಡ ಕತಗಾಲ ವಲಯ ಅರಣ್ಯಕ್ಕೆ ತೆರಳಿ ಕರಿ ಚಿರತೆ ಮರಿಯನ್ನು ರಕ್ಷಣೆ ಮಾಡಿ ತಂದಿದ್ದಾರೆ. ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಈಗಾಗಲೇ ಮಿಂಚು ಹೆಸರಿನ ಕರಿ ಚಿರತೆ ಇದ್ದು, ಮತ್ತೊಂದು ಕರಿ ಚಿರತೆ ಸೇರ್ಪಡೆಯಾಗಿದೆ.