alex Certify ಮೊಬೈಲ್​ನಲ್ಲಿ 100ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳ ಸರಣಿಗಳನ್ನೇ ಇಟ್ಟಿದ್ದ ರಾಜ್​ ಕುಂದ್ರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ನಲ್ಲಿ 100ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳ ಸರಣಿಗಳನ್ನೇ ಇಟ್ಟಿದ್ದ ರಾಜ್​ ಕುಂದ್ರಾ….!

ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ರಾಜ್​ ಕುಂದ್ರಾ ಎರಡು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನ ಅನುಭವಿಸಿದ ಬಳಿಕ ಕೊನೆಗೂ ಜಾಮೀನಿನ ಮೂಲಕ ಹೊರ ಬಂದಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿ ರಾಜ್​ ಕುಂದ್ರಾ ಮೊಬೈಲ್​, ಲ್ಯಾಪ್​ಟಾಪ್​ ಹಾಗೂ ಹಾರ್ಡ್ ಡ್ರೈವ್​ ಡಿಸ್ಕ್​​ನಿಂದ ಬರೋಬ್ಬರಿ 119 ಪಾರ್ನ್ ವಿಡಿಯೋಗಳನ್ನು ಪತ್ತೆ ಮಾಡಿದ್ದರು ಎನ್ನಲಾಗಿದೆ.

ಮುಂಬೈ ಕ್ರೈಂ ಬ್ರ್ಯಾಂಚ್​ ವಿಭಾಗದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕುಂದ್ರಾ ಈ ವಿಡಿಯೋಗಳನ್ನು ಬರೋಬ್ಬರಿ 9 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಪ್ಲಾನ್​ ಹೊಂದಿದ್ದರು ಎಂದು ತಿಳಿದು ಬಂದಿದೆ.

ಮುಂಬೈ ಕೋರ್ಟ್​ ಸೋಮವಾರ ರಾಜ್​ ಕುಂದ್ರಾಗೆ 50000 ರೂಪಾಯಿ ಶ್ಯೂರಿಟಿಗೆ ಜಾಮೀನು ಮಂಜೂರು ಮಾಡಿದೆ.

ರಾಜ್​ ಕುಂದ್ರಾ ಅಸೋಸಿಯೇಟ್​ ರ್ಯಾನ್​ ಥ್ರೋಪ್​ಗೂ ಜಾಮೀನು ಮಂಜೂರಾಗಿದೆ. ಇವರಿಗೂ 50000 ರೂಪಾಯಿ ಶ್ಯೂರಿಟಿಗೆ ಜಾಮೀನು ನೀಡಲಾಗಿದೆ.
ಪ್ರಕರಣ ಸಂಬಂಧ ಮುಂಬೈ ಪೊಲೀಸರು 1500 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಿಲ್ಪಾ ಶೆಟ್ಟಿ ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...