alex Certify ‘ಜಿನ್ನಾ ಹೌಸ್’​ನ್ನು ಕಲಾ ಕೇಂದ್ರವನ್ನಾಗಿಸುವಂತೆ ಬಿಜೆಪಿ ಮುಖಂಡರಿಂದ ಕೇಂದ್ರಕ್ಕೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಿನ್ನಾ ಹೌಸ್’​ನ್ನು ಕಲಾ ಕೇಂದ್ರವನ್ನಾಗಿಸುವಂತೆ ಬಿಜೆಪಿ ಮುಖಂಡರಿಂದ ಕೇಂದ್ರಕ್ಕೆ ಮನವಿ

ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್​ ಪ್ರಭಾತ್​​ ಲೋಧಾ ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನ ಭೇಟಿಯಾಗಿದ್ದು ಪಾಕಿಸ್ತಾನ ಸ್ಥಾಪಕ ಮೊಹಮ್ಮದ್​ ಅಲಿ ಜಿನ್ನಾರಿಗೆ ಸೇರಿದ ‘ಜಿನ್ನಾ ಹೌಸ್’​ನ್ನು ಕಲೆ ಹಾಗೂ ಸಂಸ್ಕೃತಿಯ ಕೇಂದ್ರವಾಗಿ ಪರಿವರ್ತಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಮಂಗಳವಾರ ಅಮಿತ್​ ಶಾರನ್ನ ಭೇಟಿಯಾಗಿರುವ ಶಾಸಕ ಲೋಧಾ ಬಹುಕಾಲದ ಬೇಡಿಕೆಯನ್ನ ಹೊಂದಿರುವ ಪತ್ರವನ್ನ ಅಮಿತ್​ ಶಾರಿಗೆ ಹಸ್ತಾಂತರಿಸಿದ್ದಾರೆ.

ಅಮಿತ್​ ಶಾರಿಗೆ ಹಸ್ತಾಂತರಿಸಿದ ಪತ್ರದ ಕುರಿತಂತೆ ಲೋಧಾ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದಕ್ಷಿಣ ಮುಂಬೈನ ಮಲಬಾರ್​​ ಹಿಲ್​ನ ಜನಪ್ರತಿನಿಧಿಯಾಗಿರುವ ಲೋಧಾರ ಈ ಕ್ಷೇತ್ರದಲ್ಲಿಯೇ ಜಿನ್ನಾ ಹೌಸ್​ ಇದೆ.

ಜಿನ್ನಾ ಈ ಆಸ್ತಿಯಲ್ಲಿ ಹತ್ತು ವರ್ಷಗಳ ಕಾಲ ವಾಸ ಮಾಡಿದ್ದಾರೆ. ಅಲ್ಲದೇ ಅವರು ದೇಶದ ವಿಭಜನೆಗೆ ಸಂಚು ಹೂಡಿದವರಾಗಿದ್ದಾರೆ. ಇದೀಗ ಈ ಆಸ್ತಿ ಭಾರತಕ್ಕೆ ಸೇರಿದೆ. ಹೀಗಾಗಿ ಇದನ್ನ ಕಲಾ ಕೇಂದ್ರವನ್ನಾಗಿ ಪರಿವರ್ತಿಸಬೇಕು ಎಂದು ಬಿಜೆಪಿ ಮುಖಂಡ ಮನವಿ ಮಾಡಿದ್ದಾರೆ.

ಜಿನ್ನಾ ಹೌಸ್ 2.5 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದು ಮುಂಬೈನ ಅತೀ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...