alex Certify ಧೋನಿ ಮಂಡಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಇವರೇ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಮಂಡಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಇವರೇ ನೋಡಿ

Who is Dr. Pardiwala who performed Dhoni's knee surgery, how much is the fee …

ಐಪಿಎಲ್ 2023ರ ಮೊದಲ ಪಂದ್ಯದಲ್ಲೇ ತಮ್ಮ ಮಂಡಿ ನೋವು ಮಾಡಿಕೊಂಡಿದ್ದ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ನೋವಿನ ನಡುವೆಯೇ ಟೂರ್ನಿಯಲ್ಲಿ ಆಡಿದ್ದರು.

ಮುಂಬಯಿಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಧೋನಿಗೆ ಡಾ. ದೀನ್ಶಾ ಪರ್ದಿವಾಲಾ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಿಸಿಸಿಐನ ವೈದ್ಯಕೀಯ ಪ್ಯಾನೆಲ್‌ನಲ್ಲಿ ದೀನ್ಶಾ ಸಹ ಇದ್ದಾರೆ.

ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಕ್ರೀಡಾ ಆರ್ಥೋಪೆಡಿಕ್ಸ್ ಹಾಗೂ ತೋಳು ಮತ್ತು ತಲೆಯ ಚಿಕಿತ್ಸೆಗಳ ವಿಭಾಗದ ಮುಖ್ಯಸ್ಥರಾಗಿದ್ದಾರೆ ಡಾ. ದೀನ್ಶಾ.

ಎಂಬಿಬಿಎಸ್, ಎಂಎಸ್ (ಆರ್ಥೋಪೆಡಿಕ್ಸ್), ಡಿಎನ್‌ಬಿ (ಆರ್ಥೋಪೆಡಿಕ್ಸ್) ಮತ್ತು ಎಫ್‌ಸಿಪಿಎಸ್‌ ವ್ಯಾಸಾಂಗ ಮಾಡಿರುವ ಡಾ. ದೀನ್ಶಾ ವೈದ್ಯರಾಗಿ 22 ವರ್ಷಗಳ ಸೇವಾನುಭವ ಹೊಂದಿದ್ದಾರೆ. ಇವರಿಗೆ ಇಂಗ್ಲಿಷ್, ಹಿಂದಿ, ಗುಜರಾತಿ ಹಾಗೂ ಮರಾಠಿಗಳಲ್ಲಿ ಮಾತನಾಡಲು ಬರುತ್ತದೆ.

ಬ್ಯಾಡ್ಮಿಂಟನ್ ಆಟಗಾರ ಪಾರುಪಳ್ಳೀ ಕಶ್ಯಪ್, ಬಾಕ್ಸರ್‌‌ ಅಖಿಲ್ ಕುಮಾರ್‌, ಕುಸ್ತಿಪಟುಗಳಾದ ಸುಶೀಲ್ ಕುಮಾರ್‌ ಮತ್ತು ಯೋಗೇಶ್ವರ್‌ ದತ್‌, ಬಾಕ್ಸರ್‌ಗಳಾದ ವಿಕಾಸ್ ಕೃಷ್ಣನ್, ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು, ಮತ್ತು ರಗ್ಬಿ ನಾಯಕ ಹೃಷಿ ಪೆಂಡ್ಸೆ ಇವರಿಂದ ಚಿಕಿತ್ಸೆ ಪಡೆದವರ ಪಟ್ಟಿಯಲ್ಲಿದ್ದಾರೆ.

ಧೋನಿಯವರ ಶಸ್ತ್ರಚಿಕಿತ್ಸೆಗೆ ಎಷ್ಟು ಖರ್ಚಾಗಿದೆ ಎಂದು ಇದುವರೆಗೂ ತಿಳಿದು ಬಂದಿಲ್ಲ. ಕೋರಾ ಬಳಕೆದಾರರೊಬ್ಬರು, ತಮ್ಮ ಮಂಡಿ ಶಸ್ತ್ರಚಿಕಿತ್ಸೆಗೆ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...