alex Certify ಪತ್ನಿಯೊಂದಿಗೆ ಜಗಳವಾಡಿದ ನಂತರ ಪೊಲೀಸ್ ಠಾಣೆಯಲ್ಲಿ ಮಣಿಕಟ್ಟು ಸೀಳಿಕೊಂಡ ಪತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಜಗಳವಾಡಿದ ನಂತರ ಪೊಲೀಸ್ ಠಾಣೆಯಲ್ಲಿ ಮಣಿಕಟ್ಟು ಸೀಳಿಕೊಂಡ ಪತಿ..!

Man Slits Wrist, Throat at Police Station Over Fight With Wifeಗಾಜಿಯಾಬಾದ್‌: ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ತನ್ನ ಮಣಿಕಟ್ಟು ಹಾಗೂ ಗಂಟಲನ್ನು ಬ್ಲೇಡ್ ನಿಂದ ಕುಯ್ದುಕೊಂಡಿರುವ ವಿಲಕ್ಷಣ ಘಟನೆ ಗಾಜಿಯಾಬಾದ್‌ನ ನಂದಗ್ರಾಮ್ ನಡೆದಿದೆ.

30 ವರ್ಷದ ಓಂಪ್ರಕಾಶ್ ಎಂಬಾತ ಮೂರು ದಿನಗಳಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು. ಈತನಿಗೆ ಕಳೆದ ಮೂರು ವರ್ಷಗಳಿಂದ ನೆರೆಹೊರೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಅಲ್ಲದೆ ಓಂಪ್ರಕಾಶ್ ತನ್ನ ಹೆಂಡತಿಯೊಡನೆ ಇರಲು ಬಯಸದೆ ಮಹಿಳೆಯ ಜೊತೆ ಇರಲು ಬಯಸಿದ್ದ.

ಓಂಪ್ರಕಾಶ್ ನ ಅನೈತಿಕ ಸಂಬಂಧದ ಬಗ್ಗೆ ದಂಪತಿಗಳ ಮಧ್ಯೆ ಭಾರಿ ವಾಗ್ವಾದಕ್ಕೆ ಕಾರಣವಾಯಿತು. ಬಳಿಕ ಈತ ತನ್ನ ಮನೆಯನ್ನು ತೊರೆದಿದ್ದಾನೆ. ಮೂರು ದಿನವಾದ್ರೂ ಪತಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಗೆ ವಿಚ್ಛೇದನ ನೀಡದೆ ಬೇರೊಬ್ಬಳೊಂದಿಗೆ ವಾಸಿಸಲು ಶುರುಮಾಡಿದ್ದಾನೆ ಅಂತಾ ಆಕೆ ದೂರು ನೀಡಿದ್ದಾಳೆ.

ದೂರು ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ನನ್ನು ಠಾಣೆಗೆ ಕರೆಸಿದ್ದಾರೆ. ತಾನು ತನ್ನ ಹೆಂಡತಿಯೊಂದಿಗೆ ಇರುವುದಿಲ್ಲ ಎಂದು ಹೇಳುತ್ತಾ, ಬ್ಲೇಡ್ ನಿಂದ ತನ್ನ ಮಣಿಕಟ್ಟು ಹಾಗೂ ಗಂಟಲನ್ನು ಸೀಳಿದ್ದಾನೆ. ಇದ್ರಿಂದ ದಿಗ್ಭ್ರಮೆಗೊಳಗಾದ ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಓಂಪ್ರಕಾಶ್ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಓಂಪ್ರಕಾಶ್ ಗೆ ಮದುವೆಯಾಗಿ ಐದು ವರ್ಷಗಳಾಗಿದ್ದು, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದಾನೆ. ಈತ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...