alex Certify ಶಾರೀರಿಕ ಸಂಬಂಧ ಬೆಳೆಸಲು ಹಿಂದೇಟು ಹಾಕ್ತಿದ್ದ ಪತ್ನಿ ಗುಟ್ಟು 2 ತಿಂಗಳ ನಂತ್ರ ಬಯಲಾಯ್ತು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೀರಿಕ ಸಂಬಂಧ ಬೆಳೆಸಲು ಹಿಂದೇಟು ಹಾಕ್ತಿದ್ದ ಪತ್ನಿ ಗುಟ್ಟು 2 ತಿಂಗಳ ನಂತ್ರ ಬಯಲಾಯ್ತು..!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಸಂದರ್ಭದಲ್ಲಿ ತನಗೆ ಮೋಸ ಮಾಡಿದ್ದಾರೆಂದು ಪತ್ನಿ ಹಾಗೂ ಆಕೆ ಕುಟುಂಬಸ್ಥರ ವಿರುದ್ಧ ವ್ಯಕ್ತಿಯೊಬ್ಬ ದೂರು ದಾಖಲಿಸಿದ್ದಾನೆ. ಮದುವೆಯಾದ ಎರಡು ತಿಂಗಳ ನಂತ್ರ ಸತ್ಯ ಗೊತ್ತಾಗಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಏಪ್ರಿಲ್ 28,2021 ರಂದು ಆತ ಮದುವೆಯಾಗಿದ್ದ. ಮೊದಲ ರಾತ್ರಿ ಪತ್ನಿ ಅನಾರೋಗ್ಯದ ಕಥೆ ಹೇಳಿ ದೂರವಿದ್ದಳು. ಸತತ ಎರಡು ತಿಂಗಳವರೆಗೆ ಗಂಡನ ದಾರಿ ತಪ್ಪಿಸಿದ್ದಾಳೆ. ಅನಾರೋಗ್ಯದ ಕಾರಣ ಹೇಳಿ ಸಂಬಂಧ ಬೆಳೆಸುವುದನ್ನು ಮುಂದೂಡಿದ್ದಾಳೆ. ಇದ್ರಿಂದ ಅನುಮಾನಗೊಂಡ ಪತಿ, ವೈದ್ಯರ ಬಳಿ ಕರೆದೊಯ್ದಿದ್ದಾನೆ. ಆಗ ಸತ್ಯ ಗೊತ್ತಾಗಿದೆ.

ಪತ್ನಿ, ಟ್ರಾನ್ಸ್ಜೆಂಡರ್ ಎಂದು ವೈದ್ಯರು ಹೇಳಿದ್ದಾರೆ. ಇದ್ರಿಂದ ದಂಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪತ್ನಿ, ಆಕೆ ಕುಟುಂಬಸ್ಥರ ವಿರುದ್ಧ ದೂರು ದಾಖಲಾಗಿದೆ. ವೈದ್ಯಕೀಯ ದಾಖಲೆಯನ್ನು ಸಾಕ್ಷಿಯಾಗಿ ನೀಡಿದ್ದಾನೆ. ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ವಿಚಾರಣೆ ನಂತ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...