alex Certify ಹರ್ನಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಪರೀಕ್ಷಿಸಿದ ವೈದ್ಯರೇ ದಂಗಾದ್ರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರ್ನಿಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಪರೀಕ್ಷಿಸಿದ ವೈದ್ಯರೇ ದಂಗಾದ್ರು….!

‘ಅಂಡವಾಯು’ (ಹರ್ನಿಯಾ) ಸಮಸ್ಯೆಯಿಂದಾಗಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿರುವ ವೈದ್ಯರು, ಆತನಲ್ಲಿ ವೃಷಣ ಮತ್ತು ಸ್ತ್ರೀ ಜನನಾಂಗಗಳನ್ನು ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಕೇವಲ ಒಂದು ವೃಷಣದೊಂದಿಗೆ ಜನಿಸಿದ ಮೂರು ಮಕ್ಕಳ ಈ ತಂದೆ, ಒಂದು ದಶಕದ ಕಾಲ ಕಾಟ ಕೊಟ್ಟ ತನ್ನ ತೊಡೆಸಂದು ಊತವನ್ನು ತೋರಿಸಲು ಕೊಸೊವೊದ ಆಸ್ಪತ್ರೆಗೆ ಹೋದರು.

ಈ ವೇಳೆ ವೈದ್ಯರು ಆತನ ಮೇಲಾಗಿದ್ದ 15-ಸೆಂಟಿಮೀಟರ್-10-ಸೆಂಟಿಮೀಟರ್ ಉಬ್ಬುಗಳನ್ನು ಪರೀಕ್ಷಿಸಿದಾಗ, ಅವರು ಗರ್ಭಾಶಯ, ಗರ್ಭಕಂಠ, ಫಾಲೋಪಿಯನ್ ಟ್ಯೂಬ್ ಮತ್ತು ಅಂಡಾಶಯ ಮತ್ತು ಕಾಣೆಯಾದ ಆತನ ವೃಷಣವನ್ನು ಕಂಡುಕೊಂಡರು.

ಈತನಿಗೆ ಪರ್ಸಿಸ್ಟೆಂಟ್ ಮುಲ್ಲೆರಿಯನ್ ಡಕ್ಟ್ ಸಿಂಡ್ರೋಮ್ (ಪಿಎಮ್‌ಡಿಎಸ್) ಸಮಸ್ಯೆ ಇರುವುದು ಈ ವೇಳೆ ಪತ್ತೆಯಾಯಿತು – ಪುರುಷರು ತಮ್ಮ ಶಿಶ್ನ ಮತ್ತು ಸ್ಕ್ರೋಟಮ್ ಜೊತೆಗೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುವಂಥ ಅತ್ಯಪರೂಪದ ವೈದ್ಯಕೀಯ ಸ್ಥಿತಿ ಇದಾಗಿದೆ.

ಈ ಪ್ರಕರಣದ ಅಧ್ಯಯನವನ್ನ ಯುರಾಲಜಿ ಕೇಸ್ ರಿಪೋರ್ಟ್ಸ್‌ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಿಶ್ಟಿನಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ಪ್ರಕಟಿಸಿದ್ದಾರೆ.

ರೋಗಿಯು 10 ವರ್ಷಗಳಿಂದ ಗಡ್ಡೆಯೊಂದರಿಂದ ಬಳಲುತ್ತಿದ್ದರು. ಎದ್ದು ನಿಂತಾಗ ಅಥವಾ ಕೆಮ್ಮಿದಾಗ ಅಥವಾ ಕಿಬ್ಬೊಟ್ಟೆ ಮೇಲೆ ಒತ್ತಡ ಬಿದ್ದಾಗ ದೊಡ್ಡದಾಗುತ್ತಿದ್ದ ಗಡ್ಡೆ, ಆತ ಮಲಗಿದಾಗ ಚಪ್ಪಟೆಯಾಗುತ್ತಿತ್ತು ಎಂದು ಅಧ್ಯಯನವು ಹೇಳಿದೆ.

ಒಳ ತೊಡೆಯ ಮೇಲ್ಭಾಗದಲ್ಲಿರುವ ತೊಡೆಸಂದಿಯೊಳಗೆ ಅಂಗಾಂಶವು ಚುಚ್ಚುವಂತೆ ಮಾಡುವ ಇಂಜಿನಲ್ ಅಂಡವಾಯು ಈ ರೋಗಿಯಲ್ಲಿದೆ ಎಂದು ವೈದ್ಯರು ನಿರ್ಣಯಕ್ಕೆ ಬಂದಿದ್ದಾರೆ. ಇದು ಪುರುಷರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಅಂಡವಾಯು ಡೈಲಿ ಮೇಲ್ ವರದಿ ಮಾಡಿದೆ.

ಆದಾಗ್ಯೂ, ವೈದ್ಯರು ಈತನಿಗೆ ಶಸ್ತ್ರಚಿಕಿತ್ಸೆ ಮಾಡಿದ ವೇಳೆ, ಗರ್ಭಾಶಯವೊಂದನ್ನು ಕಂಡುಕೊಂಡರು. ಫಾಲೋಪಿಯನ್ ಟ್ಯೂಬ್ ಮತ್ತು ವೃಷಣವನ್ನು ಒಳಗೊಂಡಿರುವ “ಸ್ಕ್ರೋಟಲ್ ಸ್ಯಾಕ್” ಸಹ ಈ ವೇಳೆ ಕಂಡುಬಂದಿದ್ದು, ಅದಕ್ಕೆ ಅಂಡಾಶಯ ಜೋಡಣೆಯಾಗಿತ್ತು.

ಪಿಎಂಡಿಎಸ್ ಹೊಂದಿರುವ ಜನರು ಬಂಜೆತನದ ಅಪಾಯದಲ್ಲಿರುವ ವೇಳೆ, 67 ವರ್ಷ ವಯಸ್ಸಿನ ಈ ರೋಗಿಗೆ ಮೂರು ಮಕ್ಕಳಿದ್ದು, ಇದಕ್ಕೆ ಕಾರಣ ಸರಿಯಾದ ಸ್ಥಳದಲ್ಲಿ ಮೂತ್ರನಾಳದ ತೆರೆಯುವಿಕೆಯೊಂದಿಗೆ “ಉತ್ತಮವಾಗಿ ಅಭಿವೃದ್ಧಿ ಹೊಂದಿದ ಶಿಶ್ನ” ಇರುವುದಾಗಿದೆ ಎನ್ನುತ್ತಾರೆ ವೈದ್ಯರು.

ಇಡಿಯ ವೈದ್ಯಕೀಯ ಸಾಹಿತ್ಯದಲ್ಲಿ ಪಿಡಿಎಂಎಸ್‌ನ ಕೇವಲ 200 ಪ್ರಕರಣಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...