alex Certify ‘ಮೇಕಪ್‌’ ತೆಗೆಯದೆ ಮಲಗಿದರೆ ಹೀಗಾಗುತ್ತೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೇಕಪ್‌’ ತೆಗೆಯದೆ ಮಲಗಿದರೆ ಹೀಗಾಗುತ್ತೆ ನೋಡಿ

ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ. ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ ಬಿಟ್ಟರೆ ಅಡ್ಡ ಪರಿಣಾಮ ಹೆಚ್ಚು.

ಈ ತಪ್ಪನ್ನು ಮಾಡುವುದರಿಂದ ನಮ್ಮ ಮುಖದ ಮೇಲೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ನೋಡಿ.

* ಫಂಕ್ಷನ್‌ ಗೆ ಹೊರಡುವಾಗ ಹಚ್ಚಿದ ಐ ಶ್ಯಾಡೋ, ಐ ಲೈನರ್‌ ಇವುಗಳನ್ನು ಮಲಗುವ ಮುನ್ನ ತೆಗೆಯದೆ ಇದ್ದರೆ ಕಣ್ಣಿನಲ್ಲಿ ತುರಿಕೆ ಉಂಟಾಗುವುದು.

* ಮೇಕಪ್‌ನಲ್ಲಿಯೇ ಮಲಗುವುದರಿಂದ ಬ್ಲ್ಯಾಕ್‌ ಹೆಡ್ಸ್‌ ಸಮಸ್ಯೆ ಕಂಡು ಬರುವುದು.

* ಮೊಡವೆ ಇರುವವರು ಹಾಗೇ ಮಲಗಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

* ಮಲಗುವ ಮುನ್ನ ತುಟಿಯ ಲಿಪ್‌ ಸ್ಟಿಕ್‌ ತೆಗೆಯದಿದ್ದರೆ ತುಟಿ ಕಪ್ಪಾಗುವುದು. ಲಿಪ್‌ ಸ್ಟಿಕ್‌ ತೆಗೆದು ತುಟಿಗೆ ಜೇನು ಹಚ್ಚಿ ಮಲಗುವುದು ಒಳ್ಳೆಯದು.

* ದಿನ ಪೂರ್ತಿ ಮೇಕಪ್‌ನಲ್ಲಿದ್ದರೆ ಮುಖ ಬೇಗನೆ ಸುಕ್ಕು ಕಟ್ಟುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...