alex Certify ಕ್ಯಾನ್ಸರ್​ ವಿರುದ್ಧದ ಹೋರಾಟದ ನಡುವೆಯೂ ಶೂಟಿಂಗ್​ ಸೆಟ್​ಗೆ ಮರಳಿದ ಹಿರಿಯ ನಟಿ ಕಿರಣ್​ ಖೇರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್​ ವಿರುದ್ಧದ ಹೋರಾಟದ ನಡುವೆಯೂ ಶೂಟಿಂಗ್​ ಸೆಟ್​ಗೆ ಮರಳಿದ ಹಿರಿಯ ನಟಿ ಕಿರಣ್​ ಖೇರ್​..!

ಕ್ಯಾನ್ಸರ್​ ವಿರುದ್ಧ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್​ ಹಿರಿಯ ನಟಿ ಹಾಗೂ ರಾಜಕಾರಣಿ ಕಿರಣ್​ ಖೇರ್​​ ಇಂಡಿಯಾಸ್​ ಗಾಟ್​ ಟ್ಯಾಲೆಂಟ್​​​ ಕಾರ್ಯಕ್ರಮದ ಹೊಸ ಆವೃತ್ತಿಗೆ ತೀರ್ಪುಗಾರರಾಗಿ ಮರಳಿದ್ದಾರೆ. ಕಿರಣ್​ಗೆ ಈ ವರ್ಷದ ಆರಂಭದಲ್ಲಿ ಮಲ್ಟಿಪಲ್​ ಮೈಲೋಮಾ ಎಂದು ಕರೆಯಲ್ಪಡುವ ರಕ್ತದ ಕ್ಯಾನ್ಸರ್​ ಇರುವ ವಿಚಾರ ಬೆಳಕಿಗೆ ಬಂದಿತ್ತು.

ಇದಾದ ಬಳಿಕ ಕ್ಯಾನ್ಸರ್​ ವಿರುದ್ಧ ಹೋರಾಟ ಆರಂಭಿಸಿದ ನಟಿ ಕಿರಣ್​ ಖೇರ್​​ ಮನೆಯಲ್ಲಿಯೇ ಇದ್ದರು. ಆದರೆ ಇದೀಗ ಹೊಸ ಆವೃತ್ತಿಯ ಇಂಡಿಯಾಸ್​ ಗಾಟ್​ ಟಾಲೆಂಟ್​ಗೆ ಕಿರಣ್​ ಖೇರ್​ ವಾಪಸ್​ ಮರಳಿದ್ದಾರೆ. ಇಂಡಿಯಾಸ್​ ಗಾಟ್​ ಟ್ಯಾಲೆಂಟ್​​ ಕಾರ್ಯಕ್ರಮದ ಸೀಸನ್​ 1ರಿಂದಲೂ ಕಿರಣ್​ ಖೇರ್​ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ.

ಕಿರಣ್​​ ಖೇರ್​​ ಜೊತೆಗೆ ಬಾದ್​ಶಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಕೂಡ ತೀರ್ಪುಗಾರರಾಗಿ ಇರಲಿದ್ದಾರೆ. ಶೂಟಿಂಗ್​ ನಡುವೆ ಸಣ್ಣ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಕಿರಣ್​ ಖೇರ್​​ ಹಾಗೂ ಬಾದ್​ ಶಾ ಜೊತೆಗೆ ಮೊದಲ ಪ್ರದರ್ಶನ ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋದಲ್ಲಿ ನಟಿ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​ ಜೊತೆಗೆ ತಮಾಷೆಯ ಸಂಭಾಷಣೆ ನಡೆಸಿದ್ದು ನನ್ನನ್ನು ದತ್ತು ಪಡೆಯಿರಿ ಎಂದು ಕಿರಣ್​ ಖೇರ್​ ಬಳಿ ಕೇಳಿದ್ದಾರೆ. ನಾನು ಶೂಟಿಂಗ್​​ಗೆ ಕಿರಣ್​ ಖೇರ್​​ ಅವರ ಆಭರಣಗಳನ್ನು ನೋಡಲೆಂದೇ ಬರುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕೆ ನಕ್ಕು ಪ್ರತಿಕ್ರಿಯಿಸಿದ ಕಿರಣ್​ ಖೇರ್​, ತಮಾಷೆ ಮಾಡಬೇಡ ಎಂದಿದ್ದಾರೆ. ಪ್ರತಿಯಾಗಿ ಶಿಲ್ಪಾ ಶೆಟ್ಟಿ, ನೀವು ನನ್ನನ್ನು ದತ್ತು ಪಡೆದುಕೊಂಡುಬಿಡಿ. ಸಿಖಂದರ್​( ಕಿರಣ್​ ಖೇರ್​​​ – ಅನುಪಮ್​ ಖೇರ್​ ದಂಪತಿಯ ಪುತ್ರ) ಇದನ್ನೆಲ್ಲ ಧರಿಸೋಕೆ ಸಾಧ್ಯವಿಲ್ಲ. ಹೀಗಾಗಿ ನನ್ನನ್ನು ದತ್ತು ಪಡೆಯಿರಿ. ಸಿಖಂದರ್​​ ನಿಮ್ಮ ಆಭರಣ ಧರಿಸೋದಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ನಗುತ್ತಲೇ ಉತ್ತರಿಸಿದ ಕಿರಣ್​ ಖೇರ್​, ಅವನಿಗೆ ಹಾಕಬೇಕು ಅನಿಸಿದರೆ ಬಹುಶಃ ಅವನು ಈ ಆಭರಣಗಳನ್ನು ಧರಿಸಬಹುದು. ಒಂದು ದಿನ ನಾನು ಆತನ ಬಳಿ ನೀನಂತೂ ಮದುವೆಯಾಗುತ್ತಿಲ್ಲ. ಹೀಗಾಗಿ ನಾನು ಈ ಆಭರಣಗಳನ್ನು ಮಾರುತ್ತೇನೆ ಎಂದು ಹೇಳಿದ್ದೆ. ಅದಕ್ಕೆ ಸಿಖಂದರ್​​, ಆ ರೀತಿ ಮಾಡಬೇಡ. ಇದನ್ನೆಲ್ಲ ನನ್ನ ಪತ್ನಿ ಧರಿಸುತ್ತಾಳೆ ಎಂದಿದ್ದ ಅಂತಾ ಹೇಳುವ ಮೂಲಕ ನಗೆಗಡಲಿನಲ್ಲಿ ತೇಲಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...