alex Certify ಅತಿ ವಿರಳ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಆರು ತಿಂಗಳ ಕಂದಮ್ಮ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ವಿರಳ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಆರು ತಿಂಗಳ ಕಂದಮ್ಮ ಸಾವು

ಸ್ಪೈನಲ್​​ ಮಸ್ಕ್ಯುಲಾರ್​ ಅಟ್ರೋಪಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಕೇರಳದ ಆರು ತಿಂಗಳ ಕಂದಮ್ಮ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಉತ್ತರ ಕೋಝಿಕೋಡೆ ಜಿಲ್ಲೆಯ ನಿವಾಸಿಯಾಗಿದ್ದ ಈ ಮಗು ಹುಟ್ಟಿನಿಂದಲೂ ಬಂದಿದ್ದ ಅನುವಂಶಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿತ್ತು.

ಆಟೋ ರಿಕ್ಷಾ ಚಾಲಕ ಆರಿಫ್​ ಎಂಬವರ ಪುತ್ರ ಇಮ್ರಾನ್,​​ ಕೋಝಿಕೋಡೆ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಹುಟ್ಟಿದ 17 ದಿನಗಳಿಂದ ಈ ಮಗು ತನ್ನ ಅನುವಂಶಿಕ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿತ್ತು. ವಿಶ್ವ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಜೊಲ್ಗೆನ್ಸ್ಮಾ ಒನಾಸೆಮ್ನೋಜಿನ್​ ಚುಚ್ಚು ಮದ್ದು ಖರೀದಿ ಮಾಡಲು ಜನರಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಲಾಗಿತ್ತು. ದೇಣಿಗೆ ರೂಪದಲ್ಲಿ ಕೋಟಿ ಕೋಟಿ ರೂಪಾಯಿ ಹಣ ಸಂಗ್ರಹಿಸಿದ ಕೆಲವೇ ದಿನಗಳಲ್ಲಿ ಇಮ್ರಾನ್​ ಸಾವನ್ನಪ್ಪಿದ್ದಾನೆ.

ವಿಶ್ವದ ಅತ್ಯಂತ ದುಬಾರಿ ಚುಚ್ಚುಮದ್ದನ್ನ ಖರೀದಿ ಮಾಡಲು ಬಡ ಕುಟುಂಬ 18 ಕೋಟಿ ರೂಪಾಯಿ ಹೊಂದಿಸಬೇಕಿತ್ತು. ವಿದೇಶದಿಂದ ಈ ಚುಚ್ಚುಮದ್ದನ್ನ ಆಮದು ಮಾಡಿಕೊಳ್ಳಲು ಆರಿಫ್​ ಕುಟುಂಬವು ಹೆಣಗಾಡುತ್ತಿತ್ತು. ಅಲ್ಲದೇ ಕೇರಳ ಹೈಕೋರ್ಟ್​ ಐವರು ಸದಸ್ಯರ ವೈದ್ಯಕೀಯ ಮಂಡಳಿ ಸ್ಥಾಪಿಸಿ ಇಮ್ರಾನ್​ರನ್ನು ಪರೀಕ್ಷಿಸಲು ಸೂಚನೆ ನೀಡಿತ್ತು.

ಮಗುವಿಗೆ 18 ಕೋಟಿ ರೂಪಾಯಿ ಚಿಕಿತ್ಸೆಗೆ ಹಣ ಬೇಕಾದ್ದರಿಂದ ಉಚಿತ ಚಿಕಿತ್ಸೆಗೆ ಅವಕಾಶ ನೀಡುವಂತೆ ಕೋರಿ ಆರಿಫ್​ ಕೇರಳ ಹೈಕೋರ್ಟ್​ಗೆ ಮೊರೆ ಹೋಗಿದ್ದರು. ಈ ತಿಂಗಳ ಆರಂಭದಿಂದ ಮಗುವಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...