alex Certify ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿನ್ನಲ್ ಮುರಳಿ ಧಿರಿಸು ತೊಟ್ಟು ಪೋಸ್ಟ್ ವೆಡ್ಡಿಂಗ್ ಶೂಟ್ ಗೆ ಪೋಸ್ ಕೊಟ್ಟ ಕೇರಳದ ವರ..!

ಟೋವಿನೋ ಥಾಮಸ್ ಅವರ ಚಿತ್ರ ಮಿನ್ನಲ್ ಮುರಳಿಯಿಂದ ಪ್ರೇರಿತನಾದ ವರನೊಬ್ಬ ತನ್ನ ಮದುವೆಗೆ ಸೂಪರ್ ಹೀರೋ ಅವತಾರದಲ್ಲಿ ಕಂಗೊಳಿಸಿ ವೈರಲ್ ಆಗಿದ್ದಾರೆ. ವರ ಅಮಲ್ ರವೀಂದ್ರನ್ ಮದುವೆಯ ಬಳಿಕ ಸಿನಿಮಾದಲ್ಲಿ ಹೀರೋ ಧರಿಸಿರುವ ಕೆಂಪು ನೀಲಿ ಬಣ್ಣದ ಸಿಗ್ನೇಚರ್ ಧಿರಿಸನ್ನು ತೊಟ್ಟು ಫೋಟೋಶೂಟ್‍ಗೆ ಪೋಸ್ ನೀಡಿದ್ದಾರೆ. ವಧು ಹಸಿರು ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

ಕೇರಳದ ಕೊಟ್ಟಾಯಂ ಮೂಲದ ದಂಪತಿ ಈ ಹಿಂದೆ ಮಿನ್ನಲ್ ಮುರಳಿ ಚಿತ್ರದಿಂದ ಪ್ರೇರಿತರಾಗಿ ಮದುವೆಗೂ ಮುನ್ನ ಪ್ರೀ-ವೆಡ್ಡಿಂಗ್ ಚಿತ್ರೀಕರಣ ಮಾಡಿದ್ದರು. ಇವರ ವಿಭಿನ್ನ ಪ್ರಯತ್ನಕ್ಕೆ ಅವರ ಕುಟುಂಬ ಹಾಗೂ ಸ್ನೇಹಿತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.‌ ತಮ್ಮ ಮದುವೆಯ ಬಳಿಕವೂ ಇದೇ ಥೀಮ್ ಮುಂದುವರೆಸಿರುವ ಈ ಜೋಡಿ ವಿಡಿಯೋ ಚಿತ್ರೀಕರಣದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.‌ ಇವರ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿ ಎಂದು ಟೋವಿನೋ‌ ಥಾಮಸ್ ಅವ್ರನ್ನ ಟ್ಯಾಗ್ ಮಾಡುತ್ತಿದ್ದಾರೆ.

ಈ ಹಿಂದೆ ಕೇರಳ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಮಿನ್ನಲ್ ಮುರಳಿ ಥೀಮ್ ಬಳಸಿದ್ದರು. ಬಳಿಕ ಮೋಟಾರು ವಾಹನ ಇಲಾಖೆ ಅತೀ ವೇಗದ ಚಾಲನೆಯ ವಿರುದ್ಧ ಪ್ರಚಾರದ ವಿಡಿಯೋದಲ್ಲಿ ಚಲನಚಿತ್ರದ ತುಣುಕುಗಳನ್ನು ಬಳಸಿದ್ದರು. ಇದೀಗ ಮದುಮಗನ ಗೆಟಪ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...