alex Certify ‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಯುಗಾದಿ’ ಹಬ್ಬ ಆಚರಣೆ ಹೇಗಿರಬೇಕು…..?

ಯುಗಾದಿ ಅಂದರೆ ಬೇವು-ಬೆಲ್ಲ. ಬೇವು-ಬೆಲ್ಲ ಅಂದರೆ ಯುಗಾದಿ. ಹೌದು, ಬೇವು-ಬೆಲ್ಲ ಈ ಹಬ್ಬದ ಸಾಂಕೇತಿಕ ಭಕ್ಷ್ಯಗಳು. ಬೇವು ಬೆಲ್ಲವನ್ನು ಹಬ್ಬದ ದಿನ ಮನೆಯ ಎಲ್ಲಾ ಸದಸ್ಯರು ಸೇವಿಸಿ ಹೋಳಿಗೆ ಮತ್ತು ಪುಳಿಯೋಗರೆ ಊಟ ಮಾಡುತ್ತಾರೆ.

ಈ ಹಬ್ಬವನ್ನು ಸಂತೋಷ, ಯೋಗಕ್ಷೇಮ, ಬೆಳವಣಿಗೆ ಮತ್ತು ಸಮೃದ್ಧಿಯ ನಿರೀಕ್ಷೆಗಳೊಂದಿಗೆ ಪ್ರತಿ ವರ್ಷವೂ ಹೊಸ ಜೀವನವನ್ನು ಸ್ವಾಗತಿಸಲು ಆಚರಿಸಲಾಗುತ್ತದೆ.

* ಈ ವಿಶೇಷ ದಿನದಂದು ಸೂರ್ಯೋದಯದ ಮೊದಲು ಎದ್ದು ಸಾಂಪ್ರದಾಯಿಕ ಎಣ್ಣೆ ಸ್ನಾನವನ್ನು ಮಾಡಬೇಕು. ನಂತರ ಹೊಸ ಬಟ್ಟೆಯನ್ನು ತೊಡಬೇಕು.

* ಇಡೀ ಮನೆಯನ್ನು ವಿಶೇಷವಾಗಿ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಬೇಕು.

* ನಂತರ ದೇವರ ವಿಗ್ರಹಗಳಿಗೆ ಎಣ್ಣೆ ಸ್ನಾನ ನೀಡಿ ಸ್ವಚ್ಛಗೊಳಿಸಬೇಕು.

* ಮನೆ ಮತ್ತು ಅಂಗಡಿಗಳನ್ನು ರಂಗೋಲಿಯೊಂದಿಗೆ ಅಲಂಕರಿಸಬೇಕು. ವಿಶೇಷವಾಗಿ ಪ್ರವೇಶ ದ್ವಾರದಲ್ಲಿ ಹೂವುಗಳು ಮತ್ತು ಮಾವಿನ ಎಲೆಗಳ ಹಾರವನ್ನು ತೂಗು ಹಾಕಬೇಕು.

* ಮನೆಯ ಎಲ್ಲಾ ಸದಸ್ಯರು ಬೇವು-ಬೆಲ್ಲವನ್ನು ಸೇವಿಸುವ ಮೊದಲು ಸೂರ್ಯ ದೇವರ ಪ್ರಾರ್ಥನೆ ಮಾಡಬೇಕು.

* ನಂತರ ಮನೆಯಲ್ಲಿ ದೇವರ ಪೂಜೆಯನ್ನು ಸಾಂಪ್ರದಾಯಿಕವಾಗಿ ಹೇಗೆ ಮಾಡುತ್ತಾರೋ ಹಾಗೇ ಮಾಡಬೇಕು ಅಥವಾ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...