alex Certify BIG NEWS: ರಾಜ್ಯದಲ್ಲಿ 2 ಸಾವಿರ ದಾಟಿದ ಸೋಂಕಿತರ ಸಂಖ್ಯೆ: 97 ಮಂದಿಗೆ ಕೊರೋನಾ ದೃಢ –73 ಮಂದಿಗೆ ಮಹಾರಾಷ್ಟ್ರದ ನಂಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ 2 ಸಾವಿರ ದಾಟಿದ ಸೋಂಕಿತರ ಸಂಖ್ಯೆ: 97 ಮಂದಿಗೆ ಕೊರೋನಾ ದೃಢ –73 ಮಂದಿಗೆ ಮಹಾರಾಷ್ಟ್ರದ ನಂಟು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2056 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 97 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2,000 ಗಡಿ ದಾಟಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ 26, ಹಾಸನ 14, ಉಡುಪಿ 18, ಮಂಡ್ಯ 15, ತುಮಕೂರು 2, ಯಾದಗಿರಿ 6, ಕಲಬುರಗಿ 6, ದಾವಣಗೆರೆ 4, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ ಜಿಲ್ಲೆಗಳಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 42 ಮಂದಿ ಮೃತಪಟ್ಟಿದ್ದು, 1378 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಪತ್ತೆಯಾದ 97 ಕೇಸ್ ಗಳಲ್ಲಿ 73 ಕೇಸ್ ಗಳು ಮಹಾರಾಷ್ಟ್ರದ ಸಂಪರ್ಕ ಇರುವ ಕೇಸ್ ಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...