alex Certify ಎಲ್ಲಿಗೆ…? ಎಷ್ಟೊತ್ತಿಗೆ…? ಇಲ್ಲಿದೆ ವಿಶೇಷ ರೈಲು ಸಂಚಾರದ ‘ಮುಖ್ಯ ಮಾಹಿತಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಿಗೆ…? ಎಷ್ಟೊತ್ತಿಗೆ…? ಇಲ್ಲಿದೆ ವಿಶೇಷ ರೈಲು ಸಂಚಾರದ ‘ಮುಖ್ಯ ಮಾಹಿತಿ’

ಬೆಂಗಳೂರು: ಲಾಕ್ ಡೌನ್ ಜಾರಿಯಾದಾಗಿನಿಂದ ಬಂದ್ ಆಗಿದ್ದ ರೈಲು ಸಂಚಾರ ಇಂದಿನಿಂದ ಆರಂಭವಾಗಿದ್ದು, ರಾಜ್ಯದಲ್ಲಿ ಎರಡು ವಿಶೇಷ ರೈಲುಗಳ ಸಂಚಾರ ಕ್ಕೆ ಚಾಲನೆ ನೀಡಲಾಗಿದೆ.

ಬೆಂಗಳೂರಿನಿಂದ ಬೆಳಗಾವಿ ಮತ್ತು ಬೆಂಗಳೂರಿನಿಂದ ಮೈಸೂರಿಗೆ ರೈಲು ಸಂಚಾರ ಆರಂಭಿಸಲಾಗುವುದು. ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಸಂಜೆ 6.30 ಕ್ಕೆ ಬೆಳಗಾವಿಯನ್ನು ತಲುಪಲಿದೆ.

ಬೆಳಗ್ಗೆ 9.20 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲು ಹೊರಡಲಿದ್ದು ಮಧ್ಯಾಹ್ನ 12.30 ಕ್ಕೆ ಮೈಸೂರು ತಲುಪಲಿದೆ. ಮಧ್ಯಾಹ್ನ 1.45 ಕ್ಕೆ ಮೈಸೂರಿನಿಂದ ಹೊರಟು ಸಂಜೆ 5 ಗಂಟೆಗೆ ಬೆಂಗಳೂರು ತಲುಪಲಿದೆ.

ಬೆಂಗಳೂರಿನಿಂದ 9.20ಕ್ಕೆ  ಹೊರಡಲಿದ್ದು ಬೆಳಗ್ಗೆ 9.43 ಕೆಂಗೇರಿ, 10.15 ಕ್ಕೆ ರಾಮನಗರ, 10.48 ಕ್ಕೆ ಮದ್ದೂರು, 11.08 ಕ್ಕೆ ಮಂಡ್ಯ, 11.44 ಪಾಂಡವಪುರ, 11.59 ನಾಗನಹಳ್ಳಿ, 12.45 ಮೈಸೂರು ತಲುಪಲಿದೆ. ಮಧ್ಯಾಹ್ನ 1.45 ಮೈಸೂರಿನಿಂದ ಹೊರಟು 1.54 ನಾಗನಹಳ್ಳಿ, 2.10 ಕ್ಕೆ ಪಾಂಡವಪುರ, 2.40 ಮಂಡ್ಯ, 3.02 ಕ್ಕೆ ಮದ್ದೂರು, 3.34 ಕ್ಕೆ ರಾಮನಗರ, 4.10 ಕ್ಕೆ ಕೆಂಗೇರಿ ಹಾಗೂ 5 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣ ತಲುಪಲಿದೆ.

ಬೆಳಗಾವಿಗೆ ಹೊರಡುವ ಬೆಂಗಳೂರು ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡಲಿದೆ. 3.25 ಹುಬ್ಬಳ್ಳಿ, ಸಂಜೆ 6.30 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು 10.45 ಹುಬ್ಬಳ್ಳಿ ಸಂಜೆ 6.30 ಕ್ಕೆ ಬೆಂಗಳೂರು ತಲುಪಲಿದೆ. ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆ ಇದ್ದು ವಿಶೇಷ ಎಕ್ಸ್ ಪ್ರೆಸ್ ಬೆಂಗಳೂರಿನಿಂದ ಸೋಮವಾರ ಬುಧವಾರ ಶುಕ್ರವಾರ ಹಾಗೂ ಬೆಳಗಾವಿಯಿಂದ ಮಂಗಳವಾರ ಗುರುವಾರ ಶನಿವಾರ ಸಂಚರಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...