alex Certify ಇಂದು ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಕರ್ನಾಟಕ ಸಂಪೂರ್ಣ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೆ ಕರ್ನಾಟಕ ಸಂಪೂರ್ಣ ಬಂದ್

ಬೆಂಗಳೂರು: ಇದೇ ಮೇ 31 ರವರೆಗೂ ಲಾಕ್ಡೌನ್ ಮುಂದುವರೆದಿದ್ದು, ಲಾಕ್ ಡೌನ್ ನಡುವೆಯೂ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಶನಿವಾರ ಸಂಜೆ 7 ಗಂಟೆಯಿಂದಲೇ ಕರ್ನಾಟಕ ಕಂಪ್ಲೀಟ್ ಬಂದ್ ಆಗಲಿದೆ.

ಪ್ರಸ್ತುತ ಲಾಕ್ಡೌನ್ 4 ಜಾರಿಯಲ್ಲಿದ್ದು ಪ್ರತಿದಿನ ಸಂಜೆ 7 ಗಂಟೆಯಿಂದ ಮರುದಿನ ಬೆಳಗ್ಗೆ 7 ಗಂಟೆಯವರೆಗೆ ಕಂಪ್ಲೀಟ್ ಬಂದ್ ಇರುತ್ತದೆ. ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ಡೌನ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಹೀಗಾಗಿ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಕಂಪ್ಲೀಟ್ ಬಂದ್ ಆಗಿರುತ್ತದೆ. ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳು ಬಂದ್ ಆಗಿರುತ್ತದೆ. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ.

ಲಾಕ್ಡೌನ್ 1 ಮತ್ತು 2 ಜಾರಿಯಲ್ಲಿ ಇದ್ದಂತೆ ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳಿಗೂ ನಿರ್ಬಂಧವಿರುತ್ತದೆ.

ನಿಗದಿಯಾಗಿರುವ ಮದುವೆ ನಡೆಸಬಹುದು. ಅನಗತ್ಯವಾಗಿ ಓಡಾಟ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಾಧ್ಯಮ, ಹಣ್ಣು, ತರಕಾರಿ, ವೈದ್ಯರು, ನರ್ಸ್ ಗಳು, ಆಂಬುಲೆನ್ಸ್ ಗಳ ಓಡಾಟಕ್ಕೆ ಅವಕಾಶವಿರುತ್ತದೆ. ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಲಿದ್ದು, ಭಾನುವಾರ ಸಂಪೂರ್ಣ ಕರ್ಪ್ಯೂ ಇರುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...