alex Certify ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಸಂತಸದಿಂದಿರಲು ಇಲ್ಲಿವೆ ಮೂರು ಸರಳ ʼಸೂತ್ರʼ

ಒತ್ತಡದ ಜೀವನದಲ್ಲಿ ಖುಷಿ ಕಳೆದು ಹೋಗಿದೆ. ಸದಾ ಟೆನ್ಷನ್, ಕಿರಿಕಿರಿ, ಬೇಸರ. ಹಣ, ಹೆಸರು ಮಾಡುವ ತವಕದಲ್ಲಿ ನಿಮ್ಮನ್ನು ನೀವು ಮರೆಯಬೇಡಿ.

ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಂಡರೆ ಮಾತ್ರ ನೀವು ಅಂದುಕೊಂಡಿದ್ದನ್ನು ಸುಲಭವಾಗಿ ಸಾಧಿಸಬಹುದು.

ಹೊಸ ಹವ್ಯಾಸ : ಪ್ರತಿದಿನ ಒಂದೇ ಕೆಲಸ ಮಾಡಿ ಬೇಸರಗೊಂಡಿರುತ್ತೀರಾ. ಹಾಗಾಗಿ ದಿನದಲ್ಲಿ ಒಂದು ಗಂಟೆಯನ್ನು ತೆಗೆದಿಡಿ. ಈ ಸಮಯದಲ್ಲಿ ಹೊಸದನ್ನೇನಾದ್ರೂ ಕಲಿಯಿರಿ. ನೃತ್ಯ, ಸಂಗೀತ, ಈಜು, ಪುಸ್ತಕ ಓದುವುದು ಹೀಗೆ ಹೊಸ ಹವ್ಯಾಸ ರೂಢಿಸಿಕೊಂಡು ಅದನ್ನು ಎಂಜಾಯ್ ಮಾಡಿ.

ನಿಮಗಾಗಿ ಸಮಯ ಮೀಸಲಿಡಿ : ಮಕ್ಕಳು, ಅತ್ತೆ, ನೆಂಟರು ಹೀಗೆ ಒಂದು ಮನೆ ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಕೆಲಸ ಮಾಡುವವರ ಪಾಡಂತೂ ಬೇಡವೇ ಬೇಡ. ನಿಮಗೆ ಅಂತಾ ಸ್ವಲ್ಪ ಸಮಯವೂ ಸಿಗುವುದಿಲ್ಲ. ಎಲ್ಲದರ ಮಧ್ಯೆಯೂ ವಿಶ್ರಾಂತಿ ಅತ್ಯಗತ್ಯ. ಹಾಗಾಗಿ ತಿಂಗಳಿಗೆ ಒಮ್ಮೆ ಪಾರ್ಲರ್ ಗೆ ಹೋಗಿ ಬನ್ನಿ. ಇಲ್ಲವೇ ಶಾಪಿಂಗ್ ಮಾಡಿ ಬನ್ನಿ. ಕೋಣೆಯಲ್ಲಿ ಏಕಾಂತದಲ್ಲಿ ಕುಳಿತು ನಿಮಗಿಷ್ಟವಾಗುವ ಪುಸ್ತಕ ಓದಿ. ನಿಮಗ್ಯಾವುದು ನೆಮ್ಮದಿ ಸಿಗುತ್ತದೆಯೋ ಅದನ್ನು ಮಾಡಿ, ಮುಂದಿನ ಕೆಲಸಕ್ಕೆ ಶಕ್ತಿ ಪಡೆಯಿರಿ.

ಸರಳ ಕ್ರಮ : ನಿಮ್ಮ ಸುತ್ತ ಮುತ್ತಲಿರುವವರನ್ನು ಪ್ರೀತಿಸಲು ಕಲಿಯಿರಿ. ಅವರ ಸ್ವಭಾವ ಅಥವಾ ಅವರ ಮಾತಿನ ಬಗ್ಗೆ ಬೇಸರಪಟ್ಟುಕೊಳ್ಳುವ ಬದಲು ಅದನ್ನು ನಿರ್ಲಕ್ಷಿಸಿ. ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇರುತ್ತದೆ. ನಮಗಿಷ್ಟವಾಗುವಂತೆ ಅವರನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವರಿರುವಂತೆ ಸ್ವೀಕರಿಸಿ. ಋಣಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...