alex Certify ಎಂಪಿಎಂ ಪುನಾರಂಭ: ಭರವಸೆ ನೀಡಿದ ಸಚಿವ ಜಗದೀಶ್ ಶೆಟ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಪಿಎಂ ಪುನಾರಂಭ: ಭರವಸೆ ನೀಡಿದ ಸಚಿವ ಜಗದೀಶ್ ಶೆಟ್ಟರ್

ಶಿವಮೊಗ್ಗ: ಭದ್ರಾವತಿ ಎಂಪಿಎಂ ಪುನರಾರಂಭಿಸುವ ಪೂರಕ ಚಟುವಟಿಕೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಎಂಪಿಎಂಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಥೆಯ ವಶದಲ್ಲಿರುವ ಸುಮಾರು 70 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸದಿರಲು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಭೂಮಿಯನ್ನು ಎಂಪಿಎಂ ವಶದಲ್ಲಿಯೇ ಇರಿಸಲು ನಿರ್ಧರಿಸಿರುವುದು ಸಂಸ್ಥೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಸಂಸ್ಥೆ ಪುನರಾರಂಭಿಸಲು ಖಾಸಗಿ ಬಂಡವಾಳಗಾರರನ್ನು ಆಕರ್ಷಿಸುವ ಪ್ರಯತ್ನ ನಡೆದಿದೆ. ಈಗಾಗಲೇ ಹಲವಾರು ಖಾಸಗಿ ಬಂಡವಾಳಗಾರರೊಂದಿಗೆ ಮಾತುಕತೆಯನ್ನು ಆರಂಭಿಸಲಾಗಿದೆ. ಸಂಸ್ಥೆಯ ಪುನರಾರಂಭದಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಎಂಪಿಎಂ ಪುನಾರಂಭಕ್ಕೆ ಸರ್ಕಾರದಿಂದ ಎಲ್ಲಾ ಪ್ರಯತ್ನ ನಡೆದಿದೆ. 70 ಸಾವಿರ ಹೆಕ್ಟೇರ್ ನೀಲಗಿರಿ ಪ್ಲಾಂಟೇಷನ್, 300 ಎಕರೆ ಟೌನ್ ಶಿಪ್ ಎಂಪಿಎಂ ಸ್ವಾಧೀನದಲ್ಲೇ ಉಳಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

1037 ಖಾಯಂ ಉದ್ಯೋಗಿಗಳ ಪೈಕಿ 773 ವಿ.ಆರ್.ಎಸ್. ತಗೊಂಡಿದ್ದಾರೆ. 119 ಮಂದಿ ಡೆಪ್ಯುಟೇಷನ್ ನಲ್ಲಿದ್ದು, 93 ಮಂದಿ ನೌಕರರು, 330 ಮಂದಿ ವಾಚರ್ಸ್ ಇದ್ದಾರೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಕೆ. ಸಂಗಮೇಶ್, ಎಸ್. ರುದ್ರೇಗೌಡ, ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ಶಿವಕುಮಾರ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಡಿ.ಎಸ್.ಅರುಣ್, ಷಡಾಕ್ಷರಿ ಮೊದಲಾದವರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...