alex Certify ಆರ್ಥಿಕ ನೆರವು, ಮೋದಿ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕ ನೆರವು, ಮೋದಿ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಶಿವಮೊಗ್ಗ: ಕೇಂದ್ರ ಸರ್ಕಾರವು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬ್ಯಾಂಕ್ ಮೂಲಕ ಆರ್ಥಿಕ ಸಹಾಯ ಕಲ್ಪಿಸಿಕೊಂಡು ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯನ್ನು (ಪಿ.ಎಂ.ಇ.ಜಿ.ಪಿ.) 2020-21ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.

18 ವರ್ಷ ಮೇಲ್ಪಟ್ಟ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿಗಳು www.kviconline.gov.in/ pmegpeportal ವೆಬ್‍ಸೈಟ್‍ನಲ್ಲಿ ಅನ್‍ಲೈನ್ ಅರ್ಜಿ ಸಲ್ಲಿಸುವುದು. ಯಾವುದೇ ವ್ಯಕ್ತಿ ಅಥವಾ ಅದೇ ಕುಟುಂಬದ ಸದಸ್ಯರು ಪಿ.ಎಂ.ಆರ್.ವೈ /ಆರ್‍ಇಜಿಪಿ /ಸಿಎಂಇಜಿಪಿ/ ಇತರೆ ಯಾವುದೇ ಸರ್ಕಾರದ ಯೋಜನೆ ಅಡಿಯಲ್ಲಿ ಸಹಾಯಧನವನ್ನು / ಹಣವನ್ನು ಪಡೆದಿದ್ದರೆ ಅಂತಹ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಪ್ಪನಾಯಕ ಸಂಕೀರ್ಣ, 3ನೇ ಮಹಡಿ, ನೆಹರು ರಸ್ತೆ, ಶಿವಮೊಗ್ಗ. ದೂ.ಸಂ.:081832-222801 ಅಥವಾ ಸಹಾಯಕ ನಿರ್ದೇಶಕರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸಾಗರ ಉಪ ವಿಭಾಗ, ಮಲ್ಟಿಸ್ಕಿಲ್ ಟ್ರೈನಿಂಗ್ ಸೆಂಟರ್, ಸೊರಬ ರಸ್ತೆ, ಸಾಗರ, ದೂ.ಸಂ.: 08183-227050 ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...