alex Certify ಎಲ್ಲರನ್ನೂ ಸೆಳೆಯುತ್ತೆ ಬಂಕಾಪುರದ ಆಕರ್ಷಕ ನಗರೇಶ್ವರ ದೇವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರನ್ನೂ ಸೆಳೆಯುತ್ತೆ ಬಂಕಾಪುರದ ಆಕರ್ಷಕ ನಗರೇಶ್ವರ ದೇವಾಲಯ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರದಲ್ಲಿರುವ ಆಕರ್ಷಕವಾದ ನಗರೇಶ್ವರ ದೇವಾಲಯ ವೈಭವವನ್ನು ತಿಳಿಸುವ ತಾಣವಾಗಿದೆ.

ಹಾವೇರಿಯಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಬಂಕಾಪುರದ ಈ ದೇವಾಲಯ ಶತಮಾನಗಳ ಹಿಂದೆ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದ್ದು, 60 ಕಂಬಗಳನ್ನು ಹೊಂದಿರುವ ದೇವಾಲಯ ಕಲಾತ್ಮಕತೆಯಿಂದ ಕೂಡಿದೆ. ಕಂಬಗಳು ಮಾತ್ರವಲ್ಲ, ಗೋಡೆಗಳ ಮೇಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿವೆ.

ವಿಶಾಲವಾದ ಮುಖಮಂಟಪದಲ್ಲಿ ಕಂಬಗಳು, ಛಾವಣಿಯಲ್ಲಿನ ಕಮಲದ ಕೆತ್ತನೆಗಳು ಕೂಡ ನೋಡುಗರನ್ನು ಸೆಳೆಯುತ್ತವೆ. ಸುಖನಾಸಿಯಲ್ಲಿನ 2 ಕಂಬಗಳು ಸೂಕ್ಷ್ಮವಾದ ಕೆತ್ತನೆಗಳಿಂದಾಗಿ ಗಮನ ಸೆಳೆಯುತ್ತವೆ.

ಪುರಾತತ್ವ ಇಲಾಖೆ ರಕ್ಷಣೆಯಲ್ಲಿ ದೇವಾಲಯವಿದ್ದು, ಈ ಪ್ರಮುಖ ಸ್ಥಳದ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲವಾಗಿದೆ. ಈ ದೇವಾಲಯವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಿದಲ್ಲಿ ಹೆಚ್ಚಿನ ಪ್ರವಾಸಿಗರಿಗೆ ಮಾಹಿತಿ ಸಿಗುತ್ತದೆ. ಪ್ರವಾಸಿಗರು ಆಗಮಿಸಿ ಇಲ್ಲಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.

ಬಿಡುವಿನಲ್ಲಿ ಕುಟುಂಬ ಸಮೇತರಾಗಿ ತೆರಳಿ ಕಾಲ ಕಳೆಯಲು ಬಂಕಾಪುರದ ನಗರೇಶ್ವರ ದೇವಾಲಯ ಹೇಳಿ ಮಾಡಿಸಿದ ತಾಣವಾಗಿದೆ. ಸುತ್ತ ಮುತ್ತ ಇನ್ನೂ ಹಲವಾರು ನೋಡಬಹುದಾದ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದು ಪ್ಲಾನ್ ಮಾಡಿಕೊಂಡು ಹೋದರೆ ಅನುಕೂಲವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...