alex Certify ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಆಲದ ಮರ ನೀವೂ ನೋಡಿದ್ದೀರಾ….?

ಒಂದು ಸುಂದರ ತಾಣಕ್ಕೆ ಹೋಗಬೇಕು. ಒಂದೇ ದಿನದಲ್ಲಿ ಹೋಗಿ ಬರುವಂತೆ ಇರಬೇಕು ಎಂದು ಬಯಸುವವರು ಬೆಂಗಳೂರು ಹೊರ ವಲಯದಲ್ಲಿರುವ ದೊಡ್ಡ ಆಲದ ಮರಕ್ಕೆ ಭೇಟಿ ನೀಡುವುದು ಸೂಕ್ತ.

ಇದು 400 ವರ್ಷಗಳಷ್ಟು ಹಳೆಯದಾದ ಆಲದ ಮರವಾಗಿದ್ದು, ಸುಮಾರು 3 ಎಕರೆ ಜಮೀನು ಪೂರ್ತಿ ಆವರಿಸಿದೆ. ಈ ಮರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಭಾರತದಲ್ಲಿ ಎರಡನೇ ದೊಡ್ಡ ಮರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ದೈತ್ಯ ಮರದ ಸಮೀಪ ಚಿಕ್ಕ ಶಿವ ದೇವಾಲಯವಿದ್ದು, ಈ ಆಲದ ಮರವನ್ನು ದೈವ ಶಕ್ತಿಯುಳ್ಳ ಮರವೆಂದು ಹೇಳಲಾಗುತ್ತದೆ. ಇದರ ಬೇರು, ಕಾಂಡ ಹಾಗೂ ಕೊಂಬೆಗಳನ್ನು ಬ್ರಹ್ಮ, ವಿಷ್ಣು, ಶಿವ ಎಂದು ಹೇಳಲಾಗುತ್ತಿದ್ದು, ಈ ತ್ರಿಮೂರ್ತಿಗಳ ಸಂಗಮವೇ ಈ ಮರವೆಂಬ ನಂಬಿಕೆ ಭಕ್ತರಲ್ಲಿದೆ.

ಈ ಜಾಗದಿಂದ 6 ಕಿ.ಮೀ ದೂರದಲ್ಲಿ ಮಂಚಿನಬೆಲೆ ಜಲಾಶಯ ಹಾಗೂ 3 ಕಿ.ಮೀ ದೂರದಲ್ಲಿ ಮುಕ್ತಿ ನಾಗ ದೇವಾಲಯವಿದೆ. ಇದೊಂದು ಪವಿತ್ರ ಕ್ಷೇತ್ರವಾಗಿದ್ದು, ನಿತ್ಯವೂ ನೂರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...