alex Certify ವಿಧವೆಯರು, ವಿಚ್ಛೇದಿತೆಯರನ್ನು ಪುಸಲಾಯಿಸಿ ವಂಚನೆ: 4 ಮದುವೆಯಾಗಿದ್ದ ಭೂಪ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧವೆಯರು, ವಿಚ್ಛೇದಿತೆಯರನ್ನು ಪುಸಲಾಯಿಸಿ ವಂಚನೆ: 4 ಮದುವೆಯಾಗಿದ್ದ ಭೂಪ ಅರೆಸ್ಟ್

ಬೆಂಗಳೂರು: ವೈವಾಹಿಕ ವೆಬ್ ಸೈಟ್ ಮೂಲಕ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟೆಗಾರಪಾಳ್ಯದ 35 ವರ್ಷದ ಸುರೇಶ್ ಬಂಧಿತ ಆರೋಪಿ. ಬಂಧಿತನಿಂದ ದುಬಾರಿ ಬೆಲೆಯ ಕಾರು ಹಾಗೂ ಚಿನ್ನಾಭರರಣ ವಶಕ್ಕೆ ಪಡೆಯಲಾಗಿದೆ. ಬಿಕಾಂ ಪದವೀಧರನಾಗಿರುವ ಸುರೇಶ್ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ವಿಧವೆಯರು ಮತ್ತು ವಿಚ್ಛೇದಿತೆಯನ್ನು ಸಂಪರ್ಕಿಸಿ ಪರಿಚಯಿಸಿಕೊಳ್ಳುತ್ತಿದ್ದ. ನಾನು ಅನಾಥ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ.

ನಿವೇಶನ ಖರೀದಿ ನೆಪದಲ್ಲಿ ಹಣ, ಚಿನ್ನಾಭರಣ ಪಡೆದು ವಂಚಿಸಿದ್ದ. ಇದೇ ರೀತಿ ಸುಮಾರು 11 ಮಹಿಳೆಯರಿಗೆ ವಂಚಿಸಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಈತ ನಾಲ್ವರನ್ನು ಮದುವೆಯಾಗಿದ್ದು ವಂಚನೆಗೊಳಗಾದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಶ್ರೀಮಂತ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡಿದ್ದ ಈತ ಅಮಾಯಕನಂತೆ ವರ್ತಿಸಿ ಹಣ ಸುಲಿಗೆ ಮಾಡುತ್ತಿದ್ದ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಹಲವು ಮಹಿಳೆಯರಿಗೆ ಆರೋಪಿ ವಂಚಿಸಿರುವ ಮಾಹಿತಿ ಗೊತ್ತಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...