alex Certify 36 ಗಂಟೆ ಕರ್ಫ್ಯೂ ಮಾದರಿ ಲಾಕ್ಡೌನ್ ಮುಕ್ತಾಯ: ಇಂದಿನಿಂದ ಸಹಜ ಸ್ಥಿತಿಗೆ ಜನ ಜೀವನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

36 ಗಂಟೆ ಕರ್ಫ್ಯೂ ಮಾದರಿ ಲಾಕ್ಡೌನ್ ಮುಕ್ತಾಯ: ಇಂದಿನಿಂದ ಸಹಜ ಸ್ಥಿತಿಗೆ ಜನ ಜೀವನ

ಬೆಂಗಳೂರು: ಮೇ 31 ರವರೆಗೆ ಲಾಕ್ ಡೌನ್ 4.0 ಜಾರಿಯಲ್ಲಿದ್ದು ಶನಿವಾರ ಸಂಜೆ 7 ಗಂಟೆಯಿಂದ ಆರಂಭವಾದ ಕರ್ಫ್ಯೂ ಮಾದರಿ ಲಾಕ್ಡೌನ್ ಸೋಮವಾರ ಬೆಳಗ್ಗೆ 7 ಗಂಟೆಗೆ ಮುಕ್ತಾಯವಾಗಲಿದೆ. ಇಂದಿನಿಂದ ಜನ ಜೀವನ ಸಹಜ ಸ್ಥಿತಿಗೆ ಬರಲಿದೆ.

ಇಂದಿನಿಂದ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಅಂಗಡಿ ಮುಂಗಟ್ಟುಗಳು ಓಪನ್ ಆಗಲಿವೆ. ಬಸ್, ಆಟೋ ಸಂಚಾರ ಆರಂಭವಾಗಲಿದೆ. ಬೀದಿ ಬದಿ ವ್ಯಾಪಾರ, ಮದ್ಯದಂಗಡಿ, ಸಿಟಿ ಬಸ್, ಹಣ್ಣು ತರಕಾರಿ, ಮಾಂಸ, ದಿನಸಿ ಅಂಗಡಿ, ಆಯ್ದ ಮಾರ್ಗಗಳಲ್ಲಿ ರೈಲು, ವಿಮಾನ ಸಂಚಾರ ಆರಂಭವಾಗಲಿದೆ.

ಶನಿವಾರದಿಂದ ಸೋಮವಾರದವರೆಗಿನ 36 ಗಂಟೆಗಳ ಕರ್ಫ್ಯೂ ಮುಗಿದಿದ್ದು ಉಳಿದಂತೆ ಲಾಕ್ಡೌನ್ ಸಡಿಲಿಸಿ ನೀಡಲಾದ ವಿನಾಯಿತಿಗಳು ಮುಂದುವರೆಯಲಿದೆ. ಅಂಗಡಿಗಳು ಓಪನ್ ಆಗಲಿದ್ದು ವಾಹನ ಸಂಚಾರ ಕೂಡ ಆರಂಭವಾಗಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮುಂದುವರೆಯಲಿದೆ. ಮುಂದಿನ ಭಾನುವಾರ ಕರ್ಫ್ಯೂ ಮಾದರಿ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...