alex Certify ʼಕೊರೊನಾʼ ಬಂದು ಹೋಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಈ ಕುರಿತ ಒಂದಷ್ಟು ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಬಂದು ಹೋಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಈ ಕುರಿತ ಒಂದಷ್ಟು ವಿವರ

ವಿಶ್ವದಲ್ಲಿ ಕೊರೊನಾ ಕಾಲಿಟ್ಟು ಬಹುತೇಕ ವರ್ಷಗಳೇ ಕಳೆಯುತ್ತಾ ಬಂದಿದೆ. ಈವರೆಗೆ ಲಕ್ಷಾಂತರ ಮಂದಿಯನ್ನು ಬಲಿ ಪಡೆದ ಕೊರೊನಾ ಈಗ ಎರಡನೇ ಅಲೆ ಮೂಲಕ ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಹೀಗಾಗಿ ವಿಶ್ವದ ಜನರಲ್ಲಿ ಕೊರೊನಾ ಭಯವಿದೆ. ಆದ್ರೆ ಶೇಕಡಾ 80ರಷ್ಟು ಜನರಿಗೆ ಮೊದಲಿನ ಅಲೆ ಸಂದರ್ಭದಲ್ಲಿ ಕೊರೊನಾ ಲಕ್ಷಣ ಸೌಮ್ಯವಾಗಿತ್ತು ಎಂಬ ವರದಿಯಿದೆ. ಕೆಲವರಲ್ಲಿ ಕೊರೊನಾ ಅಬ್ಬರಿಸದೆ ಮಾಯವಾಗಿದೆ. ಕೊರೊನಾ ಬಗ್ಗುಬಡಿಯುವ ಶಕ್ತಿ ನಿಮ್ಮ ದೇಹದಲ್ಲಿದ್ದರೆ ಕೊರೊನಾ ಹೆಚ್ಚಾಗಿ ಕಾಡುವುದಿಲ್ಲ. ಅನೇಕರು ಈಗಾಗಲೇ ನಮಗೆ ಕೊರೊನ ಬಂದು ಹೋಗಿದೆ ಎನ್ನುತ್ತಿದ್ದಾರೆ. ನಿಮಗೂ ಈ ಮೊದಲೇ ಕೊರೊನಾ ಬಂದು ಹೋಗಿದ್ಯಾ ಎಂಬುದನ್ನು ಪತ್ತೆ ಮಾಡಬಹುದು.

ಅಸಾಧ್ಯವಾಗಿದ್ದ ʼಕೊರೊನಾʼ 2ನೇ ಅಲೆ ಕಾಲಿಟ್ಟಿದ್ದೇಗೆ…? ಸಂಪೂರ್ಣ ಮಾಹಿತಿ ನೀಡಿದ ಡಾ. ರಾಜು

ಕೊರೊನಾ ಹಾಗೂ ಸಾಮಾನ್ಯ ಜ್ವರವನ್ನು ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದ್ರೂ ಕೊರೊನಾ ಪತ್ತೆ ಹಚ್ಚಬಹುದು. 99-100 ಡಿಗ್ರಿ ಜ್ವರ ನಿರಂತರವಾಗಿ ಮೂರು ದಿನಗಳ ನಂತ್ರವೂ ಕಾಡಿದ್ರೆ, ಉಸಿರಾಟ ಸಮಸ್ಯೆ, ಕೆಮ್ಮು, ತಲೆನೋವು, ಗಂಟಲು ಉರಿ ಇವೆಲ್ಲವೂ ಕೊರೊನಾ ಲಕ್ಷಣ. ನೆಗಡಿ, ಸಾಮಾನ್ಯ ಜ್ವರದಲ್ಲೂ ಇದು ಕಾಡುತ್ತದೆ. ಆದ್ರೆ 6 ತಿಂಗಳಲ್ಲಿ ನಿಮಗೂ ಜ್ವರ ಕಾಡಿದ್ಯಾ ಎಂಬುದನ್ನು ನೆನಪಿಸಿಕೊಳ್ಳಿ. ಶೇಕಡಾ 87ರಷ್ಟು ಮಂದಿಗೆ ಏಕಾಏಕಿ ಜ್ವರ ಬಂದಿತ್ತು. ಇದು ಕೊರೊನಾ ಲಕ್ಷಣ.

ವಾಸನೆ, ಬಾಯಿ ರುಚಿ ಕಡಿಮೆಯಾಗಿದ್ರೆ ಇದು ಕೊರೊನಾದ ಲಕ್ಷಣ. ಜ್ವರ ಕಾಡಿ ಸುಮಾರು ಒಂದು ತಿಂಗಳ ಕಾಲ ವಾಸನೆ ಗ್ರಹಿಸುವುದು ಕಷ್ಟವಾಗುತ್ತದೆ. ಜಠರಗಳಲ್ಲೂ ಸಮಸ್ಯೆ ಕಾಡುತ್ತದೆ. ಹಸಿವು ಕಡಿಮೆಯಾಗುತ್ತದೆ. ಇವೆಲ್ಲವೂ ಕೊರೊನಾ ಲಕ್ಷಣಗಳಾಗಿವೆ. ಈಗಾಗಲೇ ಇವು ನಿಮ್ಮನ್ನು ಕಾಡಿ ಹೋಗಿದ್ರೆ ನಿಮಗೆ ಕೊರೊನಾ ಬಂದು ಹೋಗಿದೆ ಎಂದರ್ಥ. ಹಿಂದೆ ಹೇಳಿದಂತೆ ಒಣ ಕೆಮ್ಮು, ಗಂಟಲು ನೋವು ಕೂಡ ಕೊರೊನಾ ಲಕ್ಷಣ. ಸೌಮ್ಯ ಲಕ್ಷಣದ ಕೊರೊನಾ ಹೊಂದಿರುವವರಿಗೆ ಬರೀ ಒಣ ಕೆಮ್ಮು ಕಾಡಬಹುದು. ಸಾಮಾನ್ಯವಾಗಿ ಅಲರ್ಜಿ ಕಾಲವಲ್ಲದಿದ್ದರೂ ನಿಮಗೆ ಒಣ ಕೆಮ್ಮು ಕಾಡಿದ್ದರೆ ಅದು ಕೊರೊನಾ ಆಗಿರಬಹುದು.

ರೈಲಿನ ತಳ್ಳುವ ಟ್ರಾಲಿಯಲ್ಲಿ ರಾಜತಾಂತ್ರಿಕ ಕುಟುಂಬದಿಂದ ಬರೋಬ್ಬರಿ 32 ಗಂಟೆಗಳ ಪ್ರಯಾಣ…!

ಉಸಿರಾಟದ ಸಮಸ್ಯೆ, ಕಣ್ಣು ಉರಿ, ಕಣ್ಣಲ್ಲಿ ನೀರು ಬರುವುದು, ಕಣ್ಣಿನ ಬಣ್ಣ ಬದಲಾಗುವುದು ಕೂಡ ಕೊರೊನಾ ಲಕ್ಷಣವಾಗಿದೆ.

ಮಕ್ಕಳಲ್ಲಿ ಕೊರೊನಾದ ಹೊಸ ಲಕ್ಷಣ ಕಾಡ್ತಿದೆ. ವೈರಸ್ ದೇಹದಲ್ಲಿ ಸಕ್ರಿಯವಾದಾಗ ಉರಿಯೂತ  ಉಂಟಾಗುತ್ತದೆ. ಕೈ, ಹೊಟ್ಟೆ, ಪಾದಗಳು ಅಥವಾ ಕಾಲ್ಬೆರಳುಗಳ ಸುತ್ತಲಿನ ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಊದಿಕೊಳ್ಳುತ್ತದೆ, ಕಜ್ಜಿ ಉಂಟಾಗುತ್ತದೆ. ಬೇರೆ ಯಾವುದೇ ರೋಗಲಕ್ಷಣವಿಲ್ಲದ ಮಕ್ಕಳಲ್ಲಿ ಇದು ಕಂಡು ಬಂದರೆ ಇದು ಕೂಡ ಕೊರೊನಾ ಆಗಿರಬಹುದು.

ಉತ್ತಮ ಆರೋಗ್ಯಕ್ಕೆ ಹಾಲನ್ನು ಈ ರೀತಿಯಾಗಿ ಸೇವಿಸಿ

ಈ ಎಲ್ಲ ಲಕ್ಷಣಗಳು ಬೇರೆ ಕಾರಣಕ್ಕೂ ಕಾಡಿರಬಹುದು. ಆದ್ರೆ ಕಳೆದ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಈ ಯಾವುದೇ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡು ಕಡಿಮೆಯಾಗಿದ್ದರೆ ನಿಮಗೆ ಕೊರೊನಾ ಬಂದು ಕಡಿಮೆಯಾಗಿರುವ ಸಾಧ್ಯತೆಯೂ ಇದೆ. 2019 ರ ನವೆಂಬರ್-ಡಿಸೆಂಬರ್ ನಲ್ಲೂ ಸೌಮ್ಯ ಲಕ್ಷಣಗಳು ಕಂಡು ಬಂದಿದೆ ಎಂದು ಕೆಲ ಅಧ್ಯಯನಗಳು ಹೇಳ್ತಿವೆ. ಈವೆಲ್ಲ ಲಕ್ಷಣ ನಿಮ್ಮಲ್ಲಿ ಕಾಣಿಸಿಕೊಂಡು ಕಡಿಮೆಯಾಗಿದ್ರೆ, ಕೊರೊನಾ ಬಂದು ಹೋಗಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ 2-3 ತಿಂಗಳಿಗೆ ಬದಲಾಗುತ್ತದೆ. ಹಾಗಾಗಿ ಕೊರೊನಾ ಬಂದಿರಲಿ, ಬಿಡಲಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...