alex Certify ಪತ್ನಿ ಬಾಯಿಗೆ 10ಕ್ಕೂ ಹೆಚ್ಚು ಮಾತ್ರೆ ತುರುಕಿದ ಪತಿ, ಸಿಗರೇಟ್ ನಿಂದ ಅಂಗಾಂಗ ಸುಟ್ಟು ಚಿತ್ರಹಿಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಬಾಯಿಗೆ 10ಕ್ಕೂ ಹೆಚ್ಚು ಮಾತ್ರೆ ತುರುಕಿದ ಪತಿ, ಸಿಗರೇಟ್ ನಿಂದ ಅಂಗಾಂಗ ಸುಟ್ಟು ಚಿತ್ರಹಿಂಸೆ

ಬೆಂಗಳೂರು: ಪತ್ನಿಯ ಅಂಗಾಂಗ ಸುಟ್ಟು ಪತಿರಾಯ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಜಿ ರೋಡ್ ನಿವಾಸಿಯಾಗಿರುವ 20 ವರ್ಷದ ಮಹಿಳೆಗೆ ಪತಿ ಜವಾದ್ ಎಂಬಾತ ಕಿರುಕುಳ ನೀಡಿದ್ದು, ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂರು ತಿಂಗಳ ಹಿಂದೆ ಮದುವೆಯಾಗಿದ್ದು, ಕೆಲ ದಿನಗಳ ಕಾಲ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡಿದ್ದ ಪತಿ ಜವಾದ್ ನಂತರದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಜಗಳ ತೆಗೆದು ಸಿಗರೇಟಿನಿಂದ ಸುಟ್ಟು ಚಿತ್ರ ಹಿಂಸೆ ನೀಡಿದ್ದಾನೆ. ಮೇ 21 ರಂದು ಬೆಳಿಗ್ಗೆ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಮನೆಯಲ್ಲಿದ್ದ 10ಕ್ಕೂ ಹೆಚ್ಚು ಮಾತ್ರೆಗಳನ್ನು ತೆಗೆದುಕೊಂಡು ಪತ್ನಿಯ ಬಾಯಿಗೆ ತುರುಕಿದ್ದಲ್ಲದೇ, ಬಲವಂತವಾಗಿ ನೀರು ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ. ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...